ವೀರಾಜಪೇಟೆ, ಏ. 3: ಮನೆ ಮನೆ ಕಾವ್ಯಗೋಷ್ಠಿ ಕುಟುಂಬ ಜಿಲ್ಲಾ ಸಾಹಿತ್ಯ ಸಂಘಟನೆ ಕೊಡಗು ಇವರ ವತಿಯಿಂದ ಸೋಮವಾರಪೇಟೆಯ ತಥಾಸ್ತು ಸಾತ್ವಿಕ ಸಂಸ್ಥೆ ಹಾಗೂ ನಯನ ಮಹಿಳಾ ಸಂಘದ ಪ್ರಾಯೋಜಕತ್ವದಲ್ಲಿ ತಾ. 7 ರಂದು ಪಟ್ಟಣದ ಮಹದೇಶ್ವರ ಬಡಾವಣೆಯ ಎಂ.ಬಿ. ಗೌಸ್ ಇವರ ಮನೆಯಲ್ಲಿ ಬೆಳಿಗ್ಗೆ 10 ಗಂಟೆಗೆ ಮನೆ ಮನೆ ಕಾವ್ಯಗೋಷ್ಠಿ ಕುಟುಂಬದ ಆರನೆಯ ಕವಿಗೋಷ್ಠಿ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಕವಿಗೋಷ್ಠಿ, ಕುಂಚಗಾಯನ, ಗೀತ ಗಾಯನ, ರಸಪ್ರಶ್ನೆ, ಚಿತ್ರಕಲೆಯ ಸ್ಪರ್ಧೆ ಸೇರಿದಂತೆ ಇನ್ನೂ ಅನೇಕ ಕಾರ್ಯಕ್ರಮಗಳು ನಡೆಯಲಿವೆ.