ಮಡಿಕೇರಿ, ಏ. 2: ಜಿಲ್ಲಾ ಅಬಕಾರಿ ಇಲಾಖೆಯ ವತಿಯಿಂದ ಜಿಲ್ಲೆಯ ಹಲವೆಡೆಗಳಲ್ಲಿ ದಾಳಿ ನಡೆಯುತ್ತಿದ್ದು, ಕುಟ್ಟದಲ್ಲಿ ಗಾಂಜಾ ಮಾರಾಟಕ್ಕೆ ಪ್ರಯತ್ನಿಸುತ್ತಿದ್ದ ಮಹಿಳೆಯೋರ್ವಳನ್ನು ಬಂಧಿಸಲಾಗಿದೆ. ವೀರಾಜಪೇಟೆ ವಿಭಾಗದ ಉಪ ಅಧೀಕ್ಷಕರ ನೇತೃತ್ವದಲ್ಲಿ ಕುಟ್ಟದ ಸಿಂಕೋನ ಕಾಲೋನಿಯ ಐಯಮ್ಮ ಎಂಬವರ ಮನೆಯಲ್ಲಿ ಕಾರ್ಯಾಚರಣೆ ನಡೆದಿದ್ದು, ಈ ಸಂದರ್ಭ 860 ಗ್ರಾಂ. ಗಾಂಜಾ ಪತ್ತೆಯಾಗಿದೆ. ಈ ಕುರಿತು ಎನ್‍ಡಿಪಿಎಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿದ್ದು, ಆರೋಪಿ ಮಹಿಳೆಯನ್ನು ಬಂಧಿಸಲಾಗಿದೆ.