ಮಡಿಕೇರಿ, ಏ. 2: ಕೊಡಗು- ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಪ್ರಸಕ್ತ ಚುನಾವಣೆಗೆ 22 ಅಭ್ಯರ್ಥಿಗಳು ಸ್ಪರ್ಧಿಸುವ ಮೂಲಕ ಪ್ರತಿ ಮತದಾನ ಕೇಂದ್ರದಲ್ಲಿ ಎರಡು ಮತ ಯಂತ್ರ (ಬ್ಯಾಲೆಟ್ ಯೂನಿಟ್-ಬಿಯು) ಬಳಸುವ ಅನಿವಾರ್ಯತೆ ಎದುರಾಗಿದೆ. ಜಿಲ್ಲಾಡಳಿತ ಈಗಾಗಲೇ ಎರಡು ಮತ ಯಂತ್ರ ಬಳಕೆಗೆ ಸಿದ್ಧತೆ ನಡೆಸಿದ್ದು ಹೆಚ್ಚಿನ ಯಂತ್ರಗಳು ಹಾಸನದಿಂದ ಕೊಡಗು ಜಿಲ್ಲೆಗೆ ತರಲ್ಪಟ್ಟಿವೆ. ಈ ಯಂತ್ರಗಳ ಪ್ರಥಮ ಮಟ್ಟದ ತಪಾಸಣೆ (ಫಸ್ಟ್ ಲೆವೆಲ್ ಚೆಕ್ಕಿಂಗ್-ಎಫ್.ಎಲ್.ಸಿ) ಇನ್ನೂ ನಡೆಯಬೇಕಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು “ಶಕ್ತಿ” ಗೆ ಖಾತರಿ ಪಡಿಸಿದ್ದಾರೆ. ಇದೀಗ 500 ಹೆಚ್ಚಿನ ಯಂತ್ರಗಳು ಬಂದಿದ್ದು ಸುಭದ್ರ ಕೋಣೆ (ಸ್ಟ್ರಾಂಗ್ ರೂಂ)ಯಲ್ಲಿ ಇರಿಸಲಾಗಿದೆ. ಈ ಯಂತ್ರಗಳ ತಪಾಸಣೆ ಬಳಿಕ ಸಿದ್ಧತೆ ಪೂರ್ಣಗೊಳ್ಳಲಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಮೂರ್ತಿ ಅವರು “ಶಕ್ತಿ” ಗೆ ಮಾಹಿತಿಯಿತ್ತಿದ್ದಾರೆ. ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಬಿಇಎಲ್ ಸಂಸ್ಥೆಯ ಇಂಜಿನಿಯರ್‍ಗಳು ಈ 500 ಬ್ಯಾಲೆಟ್ ಮತಯಂತ್ರಗಳ ಮೊದಲ ಹಂತದ ಪರಿಶೀಲನೆಯನ್ನು ಸದ್ಯದಲ್ಲಿಯೇ ನಡೆಸಲಿರುವದಾಗಿ ತಿಳಿದು ಬಂದಿದೆ. ಪ್ರಾರಂಭಿಕವಾಗಿ ತರಲಾಗಿದ್ದ 815 ಬ್ಯಾಲೆಟ್ ಯಂತ್ರಗಳು, 656 ಕಂಟ್ರೋಲ್ ಯಂತ್ರಗಳು ಹಾಗೂ 708 ವಿವಿ ಪ್ಯಾಟ್ ಯಂತ್ರಗಳ ಪರಿಶೀಲನೆಯನ್ನು ಈ ಹಿಂದೆಯೇ ನಡೆಸಿ ಸುÀಭದ್ರ ಕೋಣೆಯಲ್ಲಿರಿಸ ಲಾಗಿದೆ.

ಇದೀಗ ಸುಮಾರು 1315 ಬ್ಯಾಲೆಟ್ ಯಂತ್ರಗಳು ಲಭ್ಯವಿದೆ. ಇನ್ನೂ ಹೆಚ್ಚಿಗೆ ಯಂತ್ರಗಳು ಬರಲಿರುವದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಅಗತ್ಯಕ್ಕಿಂತ ಹೆಚ್ಚಿನ ಯಂತ್ರಗಳು ಬೇಕಾಗಿದ್ದು ಅನಿವಾರ್ಯ ಸಂದರ್ಭಗಳಲ್ಲಿ ಹೆಚ್ಚಿಗೆ ಯಂತ್ರಗಳನ್ನು ಬಳಸಲು ಸಿದ್ಧಪಡಿಸಿಡಲಾಗುತ್ತದೆ. ಜಿಲ್ಲೆಯಲ್ಲಿ ಸುಮಾರು 543 ಮತಗಟ್ಟೆಗಳಿವೆ. ಈಗಿನ ಅಂದಾಜಿನ ಪ್ರಕಾರ ಕೊಡಗಿನಲ್ಲಿ 1320 ರಷ್ಟು ಬ್ಯಾಲೆಟ್ ಯಂತ್ರಗಳ ಅಗತ್ಯವಿದೆ ಏಕೆಂದರೆ ಈ ಹಿಂದೆ ಸುಮಾರು 660 ಯಂತ್ರಗಳು ಮಾತ್ರ ಅಗತ್ಯವಿದ್ದು ಇದೀಗ ಎರಡೆರಡು ಬ್ಯಾಲೆಟ್ ಯಂತ್ರಗಳನ್ನು ಬಳಸಬೇಕಾಗಿರುವ ದರಿಂದ ಸಂಖ್ಯೆ ದ್ವಿಗುಣಗೊಂಡಿದೆ. ಆದರೆ, ನಿಯಂತ್ರಣ ಘಟಕ (ಕಂಟ್ರೋಲ್ ಯೂನಿಟ್) ಹಾಗೂ ವಿವಿ ಪ್ಯಾಟ್‍ಗಳು ಈ ಹಿಂದೆÉ ಇದ್ದಷ್ಟೇ ಅಂದರೆ ತಲಾ ಸುಮಾರು 660 ರಷ್ಟು ಮಾತ್ರ ಸಾಕಾಗುತ್ತಿದ್ದು ಈ ಯಂತ್ರಗಳು ಈಗಾಗಲೇ ಸಿದ್ಧಗೊಂಡಿವೆ. ಈ ಯಂತ್ರಗಳು ಕೂಡ ಅಗತ್ಯಕ್ಕಿಂತ ಅಧಿಕವಿದ್ದು ಸಂದರ್ಭಗಳಲ್ಲಿ ಬಳಕೆಗೆ ತಯಾರಿರುತ್ತದೆ ಎಂದು “ಶಕ್ತಿ” ಗೆ ಮಾಹಿತಿ ಲಭ್ಯವಾಗಿದೆ.

22 ಅಭ್ಯರ್ಥಿಗಳ ಹೆಸರನ್ನು ಒಂದೇ ಬ್ಯಾಲೆಟ್ ಯಂತ್ರದಲ್ಲಿ ಅಳವಡಿಸಲು ಸಾಧ್ಯವಿಲ್ಲ. ಒಂದು ಯಂತ್ರದಲ್ಲಿ 16 ಅಭ್ಯರ್ಥಿಗಳ ಹೆಸರುಗಳನ್ನು ಮಾತ್ರ ಅಳವಡಿಸಬಹು ದಾಗಿದೆ. ಉಳಿದ 6 ಅಭ್ಯರ್ಥಿಗಳ ಹೆಸರುಗಳನ್ನು ಮತ್ತೊಂದು ಯಂತ್ರದಲ್ಲಿ ಅಳವಡಿಸಲಾಗುವದು. 22 ಅಭ್ಯರ್ಥಿಗಳ ಹೆಸರುಗಳು ಹಾಗೂ ಜೊತೆಗೆ ನೋಟಾ (ಯಾವ ಅಭ್ಯರ್ಥಿಗೂ ಮತವಿಲ್ಲ) ಸೇರಿದಂತೆ 23 ಬಟನ್‍ಗಳಲ್ಲಿ ತನ್ನ ಆಸಕ್ತಿಯದ್ದನ್ನು ಮತದಾರ ಆರಿಸಿ ಗುಂಡಿ ಒತ್ತುವ ಮೂಲಕ ಆಯ್ಕೆ ಮಾಡಬಹುದಾಗಿದೆ..

ಕೊಡಗು ಮೈಸೂರು ಲೋಕಸಭಾ ಕ್ಷೇತ್ರದ ಒಟ್ಟು 8 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 2921 ಮತಗಟ್ಟೆ ಗಳಿವೆ. ಈ ಎಲ್ಲ ಮತUಟ್ಟ್ಟೆಗಳಲ್ಲಿಯೂ ಎರಡೆರಡು ಬ್ಯಾಲೆಟ್ ಯಂತ್ರಗಳನ್ನು ಬಳಸಲಾಗುತ್ತದೆ.

ರ್ಯಾಂಡಮೈಜೇಷನ್ ಪ್ರಕ್ರಿಯೆ

ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮಡಿಕೇರಿ ಮತ್ತು ವೀರಾಜಪೇಟೆ ವಿಧಾನಸಭಾ ಕ್ಷೇತ್ರಗಳ 543 ಮತಗಟ್ಟೆಗಳಿಗೆ ಮತಗಟ್ಟೆ ಅಧಿಕಾರಿಗಳ ನಿಯೋಜನೆ ಸಂಬಂಧ ರ್ಯಾಂಡಮೈಜೇಷನ್ (ಸಮ್ಮಿಶ್ರ) ಪ್ರಕ್ರಿಯೆಯು ಇಲ್ಲಿನ ರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಕೇಂದ್ರದ ಕಚೇರಿಯಲ್ಲಿ ಮಂಗಳವಾರ ನಡೆಯಿತು.

ಚುನಾವಣಾ ಸಾಮಾನ್ಯ ವೀಕ್ಷಕರಾದ ಕುಲದೀಪ್ ನಾರಾಯಣ, ಪೊಲೀಸ್ ವೀಕ್ಷಕರಾದ ವಿಕಾಸ್ ಪಾಠಕ್ ಅವರ ಸಮ್ಮುಖದಲ್ಲಿ ಜಿಲ್ಲಾಧಿಕಾರಿ (ಮೊದಲ ಪುಟದಿಂದ) ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ ಪಣ್ಣೇೀಕರ್, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವಮೂರ್ತಿ, ಸಹಾಯಕ ಚುನಾವಣಾಧಿಕಾರಿಗಳಾದ ಟಿ.ಜವರೇಗೌಡ, ಶ್ರೀನಿವಾಸ ಅವರ ಉಪಸ್ಥಿತಿಯಲ್ಲಿ ರ್ಯಾಂಡಮೈಜೇಷನ್ ಪ್ರಕ್ರಿಯೆ ನೆರವೇರಿತು.

ಜಿಲ್ಲೆಯಲ್ಲಿನ 543 ಮತಗಟ್ಟೆಗಳಿಗೆ ಪಿಆರ್‍ಒ, ಎಪಿಆರ್‍ಒ, 2 ನೇ, 3 ನೇ ಮತ್ತು 4 ನೇ ಮತಗಟ್ಟೆ ಅಧಿಕಾರಿಗಳ ನಿಯೋಜನೆಯನ್ನು ರ್ಯಾಂಡಮೈಜೇಷನ್ ಪ್ರಕ್ರಿಯೆ ಮೂಲಕ ಮಾಡಲಾಯಿತು.

ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಈ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿದರು. ರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಕೇಂದ್ರದ ಅಧಿಕಾರಿ ಅಜಿತ್, ಚುನಾವಣಾ ತಹಶೀಲ್ದಾರ್ ಸ್ವಾಮಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಮಚ್ಚಾಡೊ, ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ, ಚುನಾವಣಾ ವೀಕ್ಷಕರ ನೋಡಲ್ ಅಧಿಕಾರಿ ಪ್ರಮೋದ್, ಅನಿಲ್ ಕುಮಾರ್ ಮತ್ತಿತರರಿದ್ದರು.