ಸಿದ್ದಾಪುರ, ಏ. 01: ಗ್ರಾಮೀಣ ಭಾಗದ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಬರಡಿ ಗ್ರಾಮದ ಕ್ರಿಯೇಟಿವ್ ಕಾರ್ನರ್ ಸಂಘದ ವತಿಯಿಂದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿಗೆ ರಾಂಬೋ ಸಂಘದ ಅಧ್ಯಕ್ಷ ಸಾಬು ವರ್ಗಿಸ್ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಕೆಸಿಎಲ್ ಕ್ರಿಕೆಟ್ ಸಮಿತಿಯ ಪ್ರಮುಖ ಎಂ.ಎ ಅಜೀಜ್ ಮಾತನಾಡಿ ಬರಡಿ ಗ್ರಾಮದಲ್ಲಿ ಪ್ರಥಮ ಬಾರಿಗೆ ಮ್ಯಾಟ್ ಕಬಡ್ಡಿ ಪಂದ್ಯಾವಳಿಯನ್ನು ಆಯೋಜನೆ ಮಾಡುವ ಮೂಲಕ ಕ್ರೀಡಾ ಪ್ರತಿಭೆಗಳನ್ನು ಮುಂದೆ ತರುವ ಪ್ರಯತ್ನಕ್ಕೆ ಯುವಕ ಸಂಘ ಮುಂದಾಗಿರುವದು ಶ್ಲಾಘನೀಯ. ಗ್ರಾಮೀಣ ಭಾಗದ ಕ್ರೀಡಾಪಟುಗಳು ಸೌಹಾರ್ದತೆಯ ಕ್ರೀಡೆಯ ಮೂಲಕ ಜಿಲ್ಲೆ ಹಾಗೂ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಬೇಕು ಎಂದರು.
ಲೀಗ್ ಮಾದರಿಯ ಕಬಡ್ಡಿ ಪಂದ್ಯಾವಳಿಯಲ್ಲಿ ನೆಲ್ಲಿಹುದಿಕೇರಿ ಗ್ರಾಮ ವ್ಯಾಪ್ತಿಯ ತಂಡಗಳಾದ ರಾಂಬೋ, ಬ್ರದರ್ಸ್, ಸಿಟಿ ರೈಡರ್ಸ್, ಸ್ಟ್ರೈಕ್ ಫೋರ್ಸ್, ವೈಬಿಸಿ ಕ್ಲಬ್, ರಿಯಲ್ ಫೈಟರ್ಸ್, ರೆಡ್ ಆರ್ಮಿ, ವಿಲೇಜ್ ಸ್ಟ್ರೈಕರ್ ತಂಡ ಭಾಗವಹಿಸಿದ್ದವು.
ಈ ಸಂದರ್ಭದ ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತಾ ಮಂಜುನಾಥ್, ಗ್ರಾಮದ ಪ್ರಮುಖರಾದ ಶ್ರೀನಿವಾಸ್, ವಿನು, ಸಿದ್ಧಾರ್ಥ, ರಂಗಪ್ಪ, ರಜಾಕ್, ಯುವಕ ಸಂಘದ ಪ್ರಮುಖರಾದ ರಾಶಿದ್, ನೌಷಾದ್, ವಿನೀತ್, ವಿಜೇತ್, ಸಂಜಿತ್, ರಾಮರಾಜ್, ಮಹೇಂದ್ರ, ಯುನಸ್, ಸೈಜು, ತಂಬಿ, ಮೇಘನಾ, ಜಿತ್ತು, ಜಿಲ್ಲಾ ಪತ್ರಕರ್ತರ ಸಂಘದ ನಿರ್ದೇಶಕ ಎಸ್.ಎಂ. ಮುಬಾರಕ್ ಸೇರಿದಂತೆ ಮತ್ತಿತರರು ಇದ್ದರು.