ಚೆಟ್ಟಳ್ಳಿ, ಏ. 1: ಕೊಟ್ಟಮುಡಿ ಸಮೀಪದ ಹೊದವಾಡದ ಓಸಿಸ್ ಆಟ್ರ್ಸ್ ಆಂಡ್ ಸ್ಪೋಟ್ರ್ಸ್ ಕ್ಲಬ್ ವತಿಯಿಂದ ನಾಲ್ಕನೇ ವರ್ಷದ ಅಜಾದ್ ಪ್ರೀಮಿಯರ್ ಲೀಗ್ (ಎ.ಪಿ.ಎಲ್) ಕ್ರಿಕೆಟ್, ಫುಟ್ಬಾಲ್, ವಾಲಿಬಾಲ್ ಕ್ರೀಡಾಕೂಟ ನಡೆಯಿತು..
ಕ್ರಿಕೆಟ್ ಪಂದ್ಯಾಟದಲ್ಲಿ ರೈಸಿಂಗ್ ಸ್ಟಾರ್ ತಂಡವನ್ನು ಫೈನಲ್ ಪಂದ್ಯದಲ್ಲಿ ಮಣಿಸಿ ಬ್ಲೂ ರೇಂಜರ್ಸ್ ಅಜಾದ್ ತಂಡವು ಜಯಗಳಿಸಿತು.
ಅಜಾದ್ ಪ್ರೀಮಿಯರ್ ಲೀಗ್ ವಾಲಿಬಾಲ್ ಪಂದ್ಯದಲ್ಲಿ ಸಿಟಿ ಲಯನ್ಸ್ ಅಜಾದ್ ತಂಡವು ಫೈನಲ್ ಪಂದ್ಯದಲ್ಲಿ ನೈಕಿ ಲಯನ್ಸ್ ತಂಡವನ್ನು ಮಣಿಸಿ ಪ್ರಶಸ್ತಿಯನ್ನು ಪಡೆದುಕೊಂಡಿತು.
ಅಜಾದ್ ಪ್ರೀಮಿಯರ್ ಲೀಗ್ ಕಾಲ್ಚೆಂಡು ಪಂದ್ಯಾಟದಲ್ಲಿ, ಫೈನಲ್ ಪಂದ್ಯದಲ್ಲಿ ಶೂಟಿಂಗ್ ಸ್ಟಾರ್ ತಂಡವು ರೋನಾಲ್ಡೋ ತಂಡವು ಮಣಿಸಿ ಗೆಲುವು ಸಾಧಿಸಿತು.
ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಸಿನಾನ್, ಹುಸೈನ್, ಆಬಿದ್ ಇದ್ದರು.