ಗೋಣಿಕೊಪ್ಪ ವರದಿ, ಏ. 1: ಜಾತ್ಯತೀತ ಜನತಾ ದಳದ ಕಾರ್ಮಿಕ ಘಟಕದಲ್ಲಿ ಯಾವದೇ ಗೊಂದಲ ಗಳಿಲ್ಲದ ಕಾರಣ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಹೆಚ್ಚು ಮತಗಳಿಂದ ಗೆಲುವು ಪಡೆಯಲು ನಾವು ಶ್ರಮಿಸುತ್ತೇವೆ ಎಂದು ಜೆಡಿಎಸ್ ಕಾರ್ಮಿಕರ ಘಟಕದ ಜಿಲ್ಲಾಧ್ಯಕ್ಷ ಪರಮಲೆ ಗಣೇಶ್ ಹೇಳಿದರು.
ಈಗಾಗಲೇ ಕೊಡಗು ಜಿಲ್ಲೆಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವ ಕೆ. ಎಂ. ಗಣೇಶ್ ಹಾಗೂ ನಿರ್ಗಮಿತ ಅಧ್ಯಕ್ಷ ಸಂಕೇತ್ ಪೂವಯ್ಯ ಅವರ ನಿರ್ದೇಶನದಂತೆ ಚುನಾವಣಾ ಪ್ರಚಾರದಲ್ಲಿ ತೊಡಗಿಸಿ ಕೊಳ್ಳಲಾಗುವದು, ನಮ್ಮಲ್ಲಿ ಯಾವದೇ ಗೊಂದಲಗಳಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಾರ್ಮಿಕ ವರ್ಗದ ಮತ ಮೈತ್ರಿ ಅಭ್ಯರ್ಥಿ ಪಡೆಯಲು ಒಂದಾಗಿ ಶ್ರಮಿಸುತ್ತೇವೆ. ಕಾಲೋನಿಗಳಲ್ಲಿ ಹೆಚ್ಚು ಮತ ಪ್ರಚಾರದ ಮೂಲಕ ಮುಖ್ಯ ಮಂತ್ರಿ ಕುಮಾರಸ್ವಾಮಿ ಅವರ ಕೊಡುಗೆಗಳನ್ನು ತಿಳಿಸುವ ಪ್ರಯತ್ನ ಮಾಡಲಾಗುವದು ಎಂದರು. ಗೋಷ್ಠಿ ಯಲ್ಲಿ ಕುಟ್ಟ ಜೆಡಿಎಸ್ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಪಿ.ಪಿ. ರೆನ್ನಿ, ಮುಖಂಡರುಗಳಾದ ಹೆಚ್.ಎಂ. ಚಂದ, ಸುರೇಂದ್ರ್ರ ಉಪಸ್ಥಿತರಿದ್ದರು.