ಸೋಮವಾರಪೇಟೆ,ಏ.1: ಅಕ್ರಮವಾಗಿ ಇಸ್ಪೀಟ್ ಆಟವಾಡುತ್ತಿದ್ದ ಬಗ್ಗೆ ದೊರೆತ ಖಚಿತ ಸುಳಿವಿನ ಮೇರೆ ಧಾಳಿ ನಡೆಸಿದ ಪೊಲೀಸರು, 11 ಮಂದಿ ಆರೋಪಿಗಳೊಂದಿಗೆ 34,100 ನಗದನ್ನು ವಶಕ್ಕೆ ಪಡೆದಿರುವ ಘಟನೆ ಕುಂಬೂರಿನಲ್ಲಿ ನಡೆದಿದೆ.

ಕುಂಬೂರು ಗ್ರಾಮದ ಕಾಫಿ ತೋಟವೊಂದರೊಳಗೆ ಅಕ್ರಮವಾಗಿ ಕಳೆದ ಅನೇಕ ಸಮಯಗಳಿಂದ ಇಸ್ಪೀಟ್ ಆಟವಾಡುತ್ತಿದ್ದ ಕುಂಬೂರು ನಿವಾಸಿಗಳಾದ ಮಲ್ಲಜ್ಜೀರ ತಿಮ್ಮಯ್ಯ, ವಿ.ಎಂ. ಸುರೇಂದ್ರ, ಪಿ.ಕೆ. ವಸಂತ, ಎ. ಮಹೇಂದ್ರ, ಶಿವಪ್ಪ, ಬಿ.ಈ. ದಿಲೀಪ್, ಎಸ್.ಪಿ. ದಿವಾಕರ, ಹೊಸತೋಟ ಗ್ರಾಮದ ಕೆ.ವಿಶ್ವನಾಥ್, ಬಿಳಿಗೇರಿ ಗ್ರಾಮದ ಎಲ್. ಶಶಿಕುಮಾರ್, ಎಲ್. ಪುನೀತ್, ಎಸ್. ಮಂಜುನಾಥ್ ಅವರುಗಳನ್ನು ಡಿವೈಎಸ್‍ಪಿ ದಿನಕರ್ ಶೆಟ್ಟಿ ನೇತೃತ್ವದ ಪೊಲೀಸರ ತಂಡ ವಶಕ್ಕೆ ಪಡೆದಿದೆ.

ಇಸ್ಪೀಟ್ ಆಟದಲ್ಲಿ ಪಣಕ್ಕಿಟ್ಟಿದ್ದ 34,100 ನಗದು ಸೇರಿದಂತೆ 1 ಓಮ್ನಿ, 1 ಆಲ್ಟೋ ಕಾರು ಹಾಗೂ 1 ಆಟೋವನ್ನು ವಶಕ್ಕೆ ಪಡೆಯಲಾಗಿದೆ. ಪೊಲೀಸರ ಬಲೆಗೆ ಸಿಲುಕಿದ ಆರೋಪಿಗಳ ವಿರುದ್ದ ಮೊಕದ್ದಮೆ ದಾಖಲಿಸಿದ್ದು, ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಕಾರ್ಯಾಚರಣೆಯಲ್ಲಿ ವೃತ್ತ ನಿರೀಕ್ಷಕ ನಂಜುಂಡೇಗೌಡ, ಠಾಣಾಧಿಕಾರಿ ಶಿವಶಂಕರ್, ಪೇದೆಗಳಾದ ಜಗದೀಶ್, ಪ್ರವೀಣ್, ಕೇಶವ, ಶಿವಕುಮಾರ್, ದಿನಕರ್, ಪ್ರಕಾಶ್, ದಯಾನಂದ, ಸುದೀಪ್, ಜೋಸೆಫ್, ಅರುಣ್, ಸುಧೀಶ್ ಅವರುಗಳು ಭಾಗವಹಿಸಿದ್ದರು.