ನಾಪೆÇೀಕ್ಲು, ಮಾ. 31: ಸಮೀಪದ ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಳದ ಬಳಿ ಅಮ್ಮಂಗೇರಿ ಯಲ್ಲಿ ಭಾನುವಾರ ಮುಂಜಾನೆ ಪುದಿಯೋದಿ ದೇವರ ವಾರ್ಷಿಕ ಕೋಲ ವಿಜೃಂಭಣೆಯಿಂದ ನಡೆಯಿತು.

ಈ ದೈವವು ಪಾಡಿ ಶ್ರೀ ಇಗ್ಗುತ್ತಪ್ಪ ದೇವರ ಕಾವಲುಗಾರ ಆಗಿ ನೆಲೆ ನಿಂತು ನಂಬಿದವರಿಗೆ ಒಳಿತು ಮಾಡುವ ದೇವರೆಂದು ಪ್ರಸಿದ್ಧಿ ಪಡೆದಿದೆ. ಊರಿಗೆ ಬರುವ ಮಹಾಮಾರಿ ರೋಗಗಳನ್ನು ತಡೆದು ಊರನ್ನು ಕಾಪಾಡುವ ದೇವರೆಂದು ಹಿಂದಿನಿಂದಲೂ ನಂಬಿಕೆ ಇದೆ. ಇದರ ಅಂಗವಾಗಿ ಶನಿವಾರ ರಾತ್ರಿ ಭೀರ, ಭೀರಾಳಿ, ಭದ್ರಕಾಳಿ ದೇವರ ಕೋಲಗಳು ನಡೆದವು.