ಮಡಿಕೇರಿ, ಮಾ. 31: ಮುದ್ದಿನ ಸಾಕು ನಾಯಿಯೊಂದಿಗೆ ಆಟವಾಡುತ್ತಿದ್ದ 13 ವರ್ಷದ ಬಾಲಕಿಯೊಬ್ಬಳು ಆಕಸ್ಮಿಕವಾಗಿ ಕೆರೆಯೊಳಗೆ ಬಿದ್ದು ಸಾವಿಗೀಡಾಗಿರುವ ಹೃದಯವಿದ್ರಾವಕ ಘಟನೆ ವರದಿಯಾಗಿದೆ.

ಸುಂಟಿಕೊಪ್ಪ ಸಮೀಪದ 7ನೇ ಹೊಸಕೋಟೆಯ ಬಾಲಕಿಯೊಬ್ಬಳು ಮುದ್ದಿನ ಸಾಕು ನಾಯಿಯೊಂದಿಗೆ ಆಟವಾಡುತ್ತಿದ್ದಳು. ಆಟದ ನಡುವೆ ಬಾಲಕಿಯನ್ನು ನಾಯಿ ಓಡಿಸಿಕೊಂಡು ಹೋಗಿದೆ. ಆಟವಾಡುತ್ತಿದ್ದ ಜಾಗದ ಒತ್ತಿನಲ್ಲಿ ಇಳಿಜಾರಿನಿಂದ ಕೂಡಿದ ಪ್ರದೇಶದಲ್ಲಿ ಕೆರೆಯೊಂದಿದ್ದು ನಾಯಿಯ ಕೈಗೆ ಸಿಗದಂತೆ ಓಡುತ್ತಿದ್ದ ಬಾಲಕಿ ನಿಯಂತ್ರಣ ಕಳೆದುಕೊಂಡು ಅದರೊಳಗೆ ಜಾರಿ ಬಿದ್ದಿದ್ದಾಳೆ. ನಂತರ ಮೇಲಕ್ಕೆ ಬರಲಾಗದೇ ಇಹಲೋಕ ತ್ಯಜಿಸಿದ್ದಾಳೆ.