ಮಡಿಕೇರಿ, ಮಾ.31: ಆರ್‍ಎಪಿಡಿಆರ್‍ಪಿ ಯೋಜನೆಯಡಿ 11000 ವೋಲ್ಟ್ ಭೂಮಿಯ ಒಳಭಾಗದಲ್ಲಿ ವಿದ್ಯುತ್ ಮಾರ್ಗದ ಕಾಮಗಾರಿ ಪೂರ್ಣಗೊಳಿಸಿ ಚಾಲನೆಗೊಳಿಸಲಾಗಿದೆ. ಇದು ಹೈವೋಲ್ಟೇಜ್ ಮಾರ್ಗವಾಗಿದ್ದು, ಸಂಪಿಗೆಕಟ್ಟೆ ವಿದ್ಯುತ್ ವಿತರಣಾ ಕೇಂದ್ರದಿಂದ ಮುಖ್ಯ ರಸ್ತೆಯ ಬದಿಯಲ್ಲಿ ಅರಣ್ಯ ಭವನದ ಮುಂಭಾಗ -ಚೈನ್‍ಗೇಟ್- ಸುದರ್ಶನ ವೃತ್ತ - ರೋಟರಿ ಕ್ಲಬ್ - ಕೆ.ಎಸ್.ಆರ್.ಟಿ.ಸಿ ಡಿಪೋ - ಈಸ್ಟ್ ಎಂಡ್ ಪೆಟ್ರೋಲ್ ಪಂಪ್- ಸರ್ಕಾರಿ ಆಸ್ಪತ್ರೆ - ತಿಮ್ಮಯ್ಯ ವೃತ್ತದಿಂದ ಮೂರ್ನಾಡು ರಸ್ತೆಯ ಪ್ರವಾಸಿ ಮಂದಿರದ ವರೆಗೆ ಚಾಲನೆಗೊಂಡಿದೆ.
ಹಾಗೆಯೇ ಸಂಪಿಗೆಕಟ್ಟೆ ವಿದ್ಯುತ್ ವಿತರಣಾ ಕೇಂದ್ರದಿಂದ ಮುಖ್ಯ ರಸ್ತೆಯ ಮೂಲಕ ಸಂಪಿಗೆಕಟ್ಟೆ ವೃತ್ತ-ಸೋಮವಾರಪೇಟೆ ರಸ್ತೆ - ಯಜ್ಞಾ ಕಂಫಟ್ರ್ಸ್ - ಕನ್ನಂಡಬಾಣೆ - ರಾಜೇಶ್ವರಿ ಶಾಲೆಯ ಮುಂಭಾಗ - ಆಕ್ಟ್ರಾಯಿಗೇಟ್ ವರೆಗೆ ಚಾಲನೆಗೊಂಡಿದೆ. ಆದ್ದರಿಂದ ಈ ರಸ್ತೆಯ ಎರಡು ಬದಿಯಲ್ಲಿ ಕಾಮಗಾರಿ ನಿರ್ವಹಿಸುವ ಸಂದರ್ಭ ಜಾಗೃತಿ ವಹಿಸಬೇಕು, ಜೊತೆಗೆ ನಗರದ ಸೆಸ್ಕ್ ಕಾರ್ಯನಿರ್ವಾಹಕರ ಎಂಜಿನಿಯರ್ ಅವರ ಕಚೇರಿಯ ಗಮನಕ್ಕೆ ತರುವಂತೆ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.