ನಾಪೆÇೀಕ್ಲು, ಮಾ. 31: ಎಲ್ಲೆಡೆ ಕುಡಿಯುವ ನೀರಿಗಾಗಿ ಹಾಹಾಕಾರ ಕೇಳಿ ಬರುತ್ತಿದೆ. ಆದರೆ ಒಂದೆಡೆ ಮಳೆ ನೀರು ರಸ್ತೆಯಲ್ಲಿ ಸಂಗ್ರಹಗೊಂಡು ವಾಹನ ಚಾಲಕರು ವಾಹನ ಓಡಿಸಲು ಪರದಾಡುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇದು ನಾಪೆÇೀಕ್ಲು - ಪಾರಾಣೆ ರಸ್ತೆಯ ಬೇತು ಗ್ರಾಮದಲ್ಲಿ ಅಲ್ಲಲ್ಲಿ ಕಂಡು ಬರುತ್ತಿರುವ ದೃಶ್ಯ. ಈ ಗ್ರಾಮಕ್ಕೆ ವಾರದಲ್ಲಿ ಒಂದೆರಡು ಮಳೆ ಸುರಿಯುತ್ತಿರುವ ಕಾರಣ ಮಳೆ ನೀರು ರಸ್ತೆಯಲ್ಲಿ 2-3 ಅಡಿಗಳಷ್ಟು ಸಂಗ್ರಹಗೊಳ್ಳುತ್ತದೆ. ಈ ರಸ್ತೆಯ ಅಗಲೀಕರಣದ ಕಾರಣದಿಂದ ಚರಂಡಿ ಮುಚ್ಚಿ ಹೋಗಿದ್ದು, ಮಳೆ ಬಂದರೆ ತಗ್ಗು ರಸ್ತೆಗಳು ಕೆರೆಗಳಾಗಿ ಮಾರ್ಪಾಡಾಗುತ್ತದೆ. ಪಾದಾಚಾರಿಗಳಿಗೆ ಈ ರಸ್ತೆಯಲ್ಲಿ ಸಂಚರಿಸಲು ಸಾಧ್ಯವಿಲ್ಲದಂತಾಗಿ ರಸ್ತೆಯ ಡಾಮರನ್ನು ತೆಗೆಯಲಾಗಿದ್ದು, ಮಣ್ಣು ರಸ್ತೆಯಲ್ಲಿ ನೀರು ಸಂಗ್ರಹಗೊಂಡರೆ ರಸ್ತೆ ಕುಸಿಯುವ ಭೀತಿ ಉಂಟಾಗಿದೆ. ಬಸ್, ಲಾರಿ ಸೇರಿದಂತೆ ಭಾರೀ ವಾಹನಗಳು ಸಂಚರಿಸುವಾಗ ಅನಾಹುತವಾಗುವ ಭಯ ಮೂಡಿದೆ. ಆದುದರಿಂದ ಸಂಬಂಧಪಟ್ಟವರು ರಸ್ತೆಯಲ್ಲಿ ನೀರು ಸಂಗ್ರಹವಾಗದಂತೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಮಾಜಿ ಸೈನಿಕ ಪಾಡೆಯಂಡ ಶಂಭು ಒತ್ತಾಯಿಸಿದ್ದಾರೆ.