ವೀರಾಜಪೇಟೆ, ಮಾ. 31: ವೀರಾಜಪೇಟೆ ಸಮೀಪದ ವಿ. ಬಾಡಗ ಗ್ರಾಮದ ಶ್ರೀ ಮಹಾವಿಷ್ಣು ದೇವಾಲಯದ ಜೀರ್ಣೋದ್ಧಾರಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆ ವತಿಯಿಂದ ರೂ. 1.50 ಲಕ್ಷವನ್ನು ಯೋಜನಾಧಿಕಾರಿ ಸದಾಶಿವ ಗೌಡ ಹಾಗೂ ಜನಜಾಗೃತಿ ಅಧ್ಯಕ್ಷ ಬಾನಂಗಡ ಅರುಣ್‍ಕುಮಾರ್, ದೇವಾಲಯದ ಆಡಳಿತ ಮಂಡಳಿಗೆ ನೀಡಿದರು.

ಈ ಸಂದರ್ಭ ಧರ್ಮಸ್ಥಳ ಯೋಜನೆಯ ಮೇಲ್ವಿಚಾರಕ ಎಸ್. ರವಿಂದ್ರ, ಸೇವಾ ಪ್ರತಿನಿಧಿಗಳು, ಒಕ್ಕೂಟದ ಪದಾಧಿಕಾರಿಗಳು, ದೇವಾಲಯ ಸಮಿತಿ ಸದಸ್ಯರು ಉಪಸ್ಥಿತರಿದ್ದರು.