ನಾಪೆÉÇೀಕ್ಲು, ಮಾ. 31: ನಾಪೆÇೀಕ್ಲು ಕಾವೇರಿ ಯುವಕ ಸಂಘದ ವತಿಯಿಂದ ಎರಡನೇ ವರ್ಷದ ಕ್ರಿಕೆಟ್ ಪಂದ್ಯಾಟವನ್ನು ಏಪ್ರಿಲ್ 5, 6, ಮತ್ತು 7 ರಂದು ನಡೆಸಲು ತೀರ್ಮಾನಿಸಲಾಗಿದೆ ಎಂದು ಸಂಘದ ಅಧ್ಯಕ್ಷ ರಾಧಾಕೃಷ್ಣ ರೈ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಪೆÉÇೀಕ್ಲು ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುವ ಈ ಪಂದ್ಯಾಟದಲ್ಲಿ ಪ್ರಥಮ ಸ್ಥಾನಗಳಿಸಿದ ತಂಡಕ್ಕೆ ರೂ. 25 ಸಾವಿರ ನಗದು ಮತ್ತು ಟ್ರೋಫಿ, ದ್ವಿತೀಯ ಸ್ಥಾನಗಳಿಸಿದ ತಂಡಕ್ಕೆ ರೂ. 13 ಸಾವಿರ ನಗದು ಮತ್ತು ಟ್ರೋಫಿ ಮತ್ತು ತೃತೀಯ ಸ್ಥಾನಗಳಿಸಿದ ತಂಡಕ್ಕೆ ಟ್ರೋಫಿ ನೀಡ ಲಾಗುವದು. ಬೆಸ್ಟ್ ಬೌಲರ್, ಬೆಸ್ಟ್ ಬ್ಯಾಟ್ಸ್ ಮ್ಯಾನ್, ಬೆಸ್ಟ್ ವಿಕೆಟ್ ಕೀಪರ್‍ಗಳಿಗೂ ಬಹುಮಾನಗಳನ್ನು ನೀಡಲಾಗುವದು. ಪಂದ್ಯಾಟವನ್ನು 6 ಓವರ್‍ಗಳಿಗೆ ಸೀಮಿತಗೊಳಿಸಲಾಗಿದೆ. ಭಾಗವಹಿಸುವ ತಂಡಗಳು ಈ ಕೆಳಗಿನ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು. 9448647252, 9845381780.

ಗೋಷ್ಠಿಯಲ್ಲಿ ಕ್ಲಬ್‍ನ ಕಾರ್ಯದರ್ಶಿ ಮಹೇಶ್, ಖಜಾಂಚಿ ನಾಗರಾಜ್ ಇದ್ದರು.