ನಾಪೆÇೀಕ್ಲು, ಮಾ. 31: ನಾಪೆÇೀಕ್ಲು ಕೊಡವ ಸಮಾಜ ಕ್ರೀಡಾ, ಸಾಂಸ್ಕøತಿಕ ಮತ್ತು ಮನರಂಜನಾ ಕೂಟದ ವತಿಯಿಂದ ಏ. 11ರಿಂದ 13ರ ವರೆಗೆ ನಾಪೆÇೀಕ್ಲು ಕೊಡವ ಸಮಾಜದ ಕ್ಲಬ್ನ ಒಳಾಂಗಣ ಕ್ರೀಡಾಂಗಣದಲ್ಲಿ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಏರ್ಪಡಿಸಲಾಗಿದೆ ಎಂದು ಪಂದ್ಯಾವಳಿಯ ಪೆÇೀಷಕರಾದ ಕುಲ್ಲೇಟಿರ ಶಂಭು ಮಂದಪ್ಪ ತಿಳಿಸಿದರು.
ಕೊಡವ ಸಮಾಜದ ಕ್ಲಬ್ನಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಕೊಡವ ಬ್ಯಾಡ್ಮಿಂಟನ್ ಆಟಗಾರರಿಗೆ ಮತ್ತು ನಾಪೆÇೀಕ್ಲು ವ್ಯಾಪ್ತಿಯ ಆಟಗಾರರಿಗೆ ಪೆÇ್ರೀತ್ಸಾಹ ನೀಡುವ ನಿಟ್ಟಿನಲ್ಲಿ ಪಂದ್ಯಾವಳಿಯನ್ನು ನಡೆಸಲು ಉದ್ದೇಶಿಸಲಾಗಿದೆ ಎಂದರು.
ಪೆಮ್ಮುಡಿಯಂಡ ವೇಣು ಅಪ್ಪಣ್ಣ ಮಾತನಾಡಿ 15 ವರ್ಷ ಒಳಪಟ್ಟ ಬಾಲಕರಿಗೆ ಮತ್ತು ಬಾಲಕಿಯರ ಸಿಂಗಲ್ಸ್ ಮತ್ತು ಡಬಲ್ಸ್, ಮಹಿಳೆಯರ ಡಬಲ್ಸ್, ಪುರುಷರಿಗೆ ಸಿಂಗಲ್ಸ್ ಮತ್ತು ಡಬಲ್ಸ್ ಹಾಗೂ ಮಿಕ್ಸ್ಡ್ ಡಬಲ್ಸ್ ಪಂದ್ಯಾವಳಿಯನ್ನು ಆಯೋಜಿಸ ಲಾಗಿದೆ. ಭಾಗವಹಿಸುವವರು ಏ. 6ರ ಒಳಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ನೋಂದಾವಣೆಗಾಗಿ ಬೊಪ್ಪೇರ ಜಯಾ ಉತ್ತಪ್ಪ 9686019656, ಪೆಮ್ಮುಡಿಯಂಡ ವೇಣು ಅಪ್ಪಣ್ಣ 9448976392, ಕುಲ್ಲೇಟಿರ ಶಾಂತ ಕಾಳಪ್ಪ 9845246993 ಅವರನ್ನು ಸಂಪರ್ಕಿಸುವಂತೆ ಕೋರಿದರು.
ಗೋಷ್ಠಿಯಲ್ಲಿ ರಿಕ್ರಿಯೇಶನ್ ಕ್ಲಬ್ ಉಪಾಧ್ಯಕ್ಷ ಕಲ್ಯಾಟಂಡ ರಮೇಶ್ ಚಂಗಪ್ಪ, ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಕುಲ್ಲೇಟಿರ ದೇವಿ ದೇವಯ್ಯ, ಕುಲ್ಲೇಟಿರ ಶಾಂತ ಕಾಳಪ್ಪ, ಪೆÇರುಕಂಡ ಸುನಿಲ್ ಇದ್ದರು.