ಸುಂಟಿಕೊಪ್ಪ, ಮಾ. 31: ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಆಟೋದಲ್ಲಿ ಕಾಫಿ ತೋಟಕ್ಕೆ ಕರೆದ್ಯೊಯ್ದು ಅಸಭ್ಯ ವರ್ತನೆ ತೋರಿದ ಆರೋಪಿಗೆ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಸುಂಟಿಕೊಪ್ಪ ಬಾಳೆಕಾಡು ಕಾಫಿತೋಟದ ಲೈನ್ಮನೆ ನಿವಾಸಿ ಪ್ರಕಾಶ ಎಂಬಾತನಿಗೆ 3ವರ್ಷ ಸಾದಾ ಸಜೆ ಹಾಗೂ 1000 ರೂ. ದಂಡ ವಿಧಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ. ತಾ. 16.11.2017 ರಂದು ಪ್ರಕರಣ ನಡೆದಿತ್ತು.
ಸರಕಾರದ ಪರ ಸರಕಾರಿ ಅಭಿಯೋಜಕಿ ಕೃಷ್ಣವೇಣಿ ವಾದ ಮಂಡಿಸಿದರು.