ಸುಂಟಿಕೊಪ್ಪ, ಮಾ. 29: ಸುಂಟಿಕೊಪ್ಪ ಹೋಬಳಿಯ ಹರದೂರು ಗ್ರಾಮವನ್ನು ಭಾರತೀಯ ಅಂಚೆ ಇಲಾಖೆ ವತಿಯಿಂದ ಸಂಪೂರ್ಣ ಗ್ರಾಮೀಣ ಅಂಚೆ ಜೀವ ವಿಮೆ ಗ್ರಾಮವೆಂದು ಘೋಷಿಸಲಾಯಿತು.
ಸೋಮವಾರಪೇಟೆ ಅಧಿಕಾರಿ ಮಂಜುನಾಥ ಮಾತನಾಡಿ, ಗ್ರಾಮೀಣ ಭಾಗದ ಜನತೆಗೆ ಕುಡಿಯುವ ನೀರಿನ ಸೌಲಭ್ಯ, ಮಹಿಳೆ ಯರಿಗೆ ಶೌಚಾಲಯ ನಿರ್ಮಾಣ, ಬಸ್ ತಂಗುದಾಣ ನಿರ್ಮಿಸುವ ಸಲುವಾಗಿ ರೂ. 1 ಲಕ್ಷ ಅನುದಾನ ನೀಡಲಾಗುವದು ಎಂದರು.
ಅಧ್ಯಕ್ಷತೆಯನ್ನು ಗ್ರಾಮಸ್ಥ ಕೆ.ಕೆ. ಚಂಗಪ್ಪ ವಹಿಸಿದ್ದರು. ಮುಖ್ಯ ಅತಿಥಿ ಡಿ.ಆರ್. ಬಾಲಕೃಷ್ಣ, ಸಿಬ್ಬಂದಿಗಳಾದ ಬಿ.ಬಿ. ಜಿನ್ನಪ್ಪ, ಮೀನಾಕ್ಷಿ, ಸುನೀಲ್, ಸತೀಶ, ಸುನೀಲ್, ಶಿವಕುಮಾರ್, ಗ್ರಾಮಸ್ಥರು ಹಾಜರಿದ್ದರು.