ಮಡಿಕೇರಿ, ಮಾ. 29: ಕಾವೇರಿ ಗ್ರಾಮೀಣ ಬ್ಯಾಂಕ್ ಹಾಕತ್ತೂರು ಶಾಖೆಯ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾದ ಕೆ.ಎಸ್. ವೆಂಕಟೇಶ್ ಅವರನ್ನು ತೊಂಬತ್ತುಮನೆ ತ್ರಿನೇತ್ರ ಯುವಕ ಸಂಘದ ವತಿಯಿಂದ ಗೌರವಿಸಲಾಯಿತು.
ಬ್ಯಾಂಕ್ನ ಸಭಾಂಗಣದಲ್ಲಿ ನಡೆದ ಈ ಸಮಾರಂಭದಲ್ಲಿ ಯುವಕ ಸಂಘದ ಅಧ್ಯಕ್ಷ ಪಿ.ಪಿ. ಸುಕುಮಾರ್, ಸ್ಥಾಪಕ ಅಧ್ಯಕ್ಷ ಪಿ.ಇ. ದಿವಾಕರ್, ಕಾರ್ಯದರ್ಶಿ ಎಂ.ಎಂ. ಅಬ್ಬೂಬಕ್ಕರ್, ಸಾಂಸ್ಕøತಿಕ ಕಾರ್ಯದರ್ಶಿ ಎಂ.ಕೆ. ರಾಜು, ಸದಸ್ಯರಾದ ಬಿ.ಎಸ್. ಜನಾರ್ಧನ, ಎ.ಎಂ. ಕಾಶಿ, ಸಿಬ್ಬಂದಿಗಳಾದ ಮಮತ, ಕುಮಾರ್ ಮತ್ತಿತರರು ಹಾಜರಿದ್ದರು.