ವೀರಾಜಪೇಟೆ, ಮಾ. 29: ವೀರಾಜಪೇಟೆಯ ಕಾವೇರಿ ಪದವಿ ಕಾಲೇಜಿನಲ್ಲಿ ಏಪ್ರಿಲ್ 3 ರಂದು ಅಧ್ಯಾಪಕರ ಮತ್ತು ಪೋಷಕರ ಸಭೆಯನ್ನು ಆಯೋಜಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲೆ ಪ್ರೊ. ಎ.ಎಂ. ಕಮಲಾಕ್ಷಿ ತಿಳಿಸಿದ್ದಾರೆ.
ಪೋಷಕರು ಸಭೆಯಲ್ಲಿ ಪಾಲ್ಗೊಂಡು ತಮ್ಮ ಮಕ್ಕಳ ಪ್ರಗತಿಯ ಕುರಿತು ತಿಳಿದು ಕೊಳ್ಳುವಂತೆ ಸಲಹೆ ಮಾಡಿದ್ದಾರೆ.
ಬಿ.ಕಾಂ ವಿಭಾಗದವರಿಗೆ ಬೆಳಿಗ್ಗೆ 10 ಗಂಟೆಗೆ ಹಾಗೂ ಬಿಬಿಎ ಮತ್ತು ಬಿ.ಎ ವಿಭಾಗದವರಿಗೆ ಅಪರಾಹ್ನ 2 ಗಂಟೆಗೆ ಸಭೆ ಏರ್ಪಡಿಸಲಾಗಿದೆ.