ಮಡಿಕೇರಿ, ಮಾ. 29: ಕೊಡಗು ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯಿತಿ ಮಡಿಕೇರಿ, ಗ್ರಾಮ ಪಂಚಾಯಿತಿ ಹಾಕತ್ತೂರು, ಪಶು ಪಾಲನಾ ಇಲಾಖೆ, ಕೊಡಗು, ಧರ್ಮಸ್ಥಳ ಸ್ತ್ರೀಶಕ್ತಿ ಸಂಘ ಹಾಗೂ ಸ್ತ್ರೀಶಕ್ತಿ ಸ್ವಸಹಾಯ ಸಂಘ ಇವರ ಸಹಯೋಗದಲ್ಲಿ ತಾ. 30ರಂದು (ಇಂದು) ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಕಗ್ಗೋಡ್ಲು ಗ್ರಾಮದ ಮಂದ್ರೀರ ನಾಣಯ್ಯ ಅವರ ಗದ್ದೆ ಆವರಣದಲ್ಲಿ ಮಿಶ್ರತಳಿ ಹಸು, ಕರುಗಳ ಪ್ರದರ್ಶನ ನಡೆಯಲಿದೆ. ಗುರುವಾಯುರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.