ಸೋಮವಾರಪೇಟೆ, ಮಾ. 28: ದೇಶದ ಪ್ರಧಾನಿ ನರೇಂದ್ರ ಮೋದಿ ಅವರೇ ಸ್ವತಃ ಪೊರಕೆ ಹಿಡಿದು ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಿದ್ದರೂ ಸಹ ದೇಶದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸ್ವಚ್ಛತೆ ಕಾಣುತ್ತಿಲ್ಲ. ಇದಕ್ಕೆ ಜೀವಂತ ಉದಾಹರಣೆಯೊಂದು ಬೇಳೂರು ಗ್ರಾಮ ಪಂಚಾಯಿತಿಯ ಬಜೆಗುಂಡಿ ಗ್ರಾಮದಲ್ಲಿ ಕಾಣಸಿಗುತ್ತದೆ.

ಬಜೆಗುಂಡಿ ಗ್ರಾಮದ ಮೂಲಕ ಹಾದುಹೋಗಿರುವ ಸೋಮವಾರಪೇಟೆ-ಮಡಿಕೇರಿ ರಾಜ್ಯ ಹೆದ್ದಾರಿಯೇ ಇಲ್ಲಿ ಕಸದ ತೊಟ್ಟಿಯಾಗಿದೆ. ಪಂಚಾಯಿತಿ ಆಡಳಿತ ಮಾತ್ರ ಈ ಬಗ್ಗೆ ಗಮನಹರಿಸದೇ ತ್ಯಾಜ್ಯ ವಿಲೇವಾರಿಯಿಂದ ಹಿಂದೆ ಸರಿದಿದೆ.

3 ರಿಂದ 4 ತಿಂಗಳಿಗೊಮ್ಮೆ ಇಲ್ಲಿ ಬೆಟ್ಟದಷ್ಟು ತ್ಯಾಜ್ಯ ಶೇಖರಣೆಗೊಂಡ ನಂತರ ಪಂಚಾಯಿತಿಯಿಂದ ಟ್ರ್ಯಾಕ್ಟರ್ ಮೂಲಕ ಸಾಗಿಸಿ, ಗ್ರಾಮದ ಸಮುದಾಯ ಭವನದ ಬಳಿಯಿರುವ ಖಾಲಿ ಜಾಗದಲ್ಲಿ ವಿಲೇವಾರಿ ಮಾಡುವ ಕಾರ್ಯ ದಶಕದಿಂದ ನಡೆದಿದೆ. ಈ ದಿಸೆಯಲ್ಲಿ ಸಂಬಂಧಿಸಿದವರು ಗಮನ ಹರಿಸಲು ಸಾರ್ವಜನಿಕರು ಆಗ್ರಹಿಸಿದ್ದಾರೆ.