ಸೋಮವಾರಪೇಟೆ, ಮಾ. 27: ಸಮೀಪದ ಗೆಜ್ಜೆಹಣಕೋಡು ಗ್ರಾಮದ ಶ್ರೀ ಸೋಮೇಶ್ವರ ದೇಗುಲದಲ್ಲಿ ಮಂಡಲ ಪೂಜೆ ಮತ್ತು ಮಳೆಗಾಗಿ ವಿಶೇಷ ಪ್ರಾರ್ಥನೆ ನೆರವೇರಿತು.

ದೇವಾಲಯ ನಿರ್ಮಾಣವಾಗಿ 48 ದಿನಗಳಾಗಿರುವ ಹಿನ್ನೆಲೆ ಗ್ರಾಮಸ್ಥರು ಮತ್ತು ಭಕ್ತರ ಸಮ್ಮುಖದಲ್ಲಿ ಮಂಡಲ ಪೂಜೋತ್ಸವ ನೆರವೇರಿತು. ಇದರೊಂದಿಗೆ ಮಳೆ ಬೀಳದೇ ಕೃಷಿ ಕಾರ್ಯಗಳಿಗೆ ಹಿನ್ನಡೆಯಾಗಿರುವದ ರಿಂದ ಲೋಕ ಕಲ್ಯಾಣಾರ್ಥ ಮಳೆಗಾಗಿ ವಿಶೇಷ ಪ್ರಾರ್ಥನಾ ಪೂಜೆ ನಡೆಸಲಾಯಿತು.

ದೇವಾಲಯದಲ್ಲಿ ಗ್ರಾಮದ ಮಹಿಳೆಯರಿಂದ ಗಂಗಾಪೂಜೆ, ಮಂಡಲಪೂಜೋತ್ಸವ ಸಮಾಪ್ತಿ ಹೋಮ, ಅಷ್ಟೋತ್ತರ, ಕುಂಭಾಬಿ üಷೇಕ, ರುದ್ರಾಭಿಷೇಕ, ಶೋಡಶೋಪ ಚಾರ, ಪೂರ್ಣಾ ಹುತಿಯ ನಂತರ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು.

ಬೆಂಗಳೂರು ಸರ್ಪಭೂಷಣ ಮಠಾಧೀಶರಾದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ, ಕೆಸವತ್ತೂರಿನ ಮಠಾಧೀಶ ಶ್ರೀ ಬಸವಲಿಂಗ ಸ್ವಾಮೀಜಿ ಅವರುಗಳ ಸಮ್ಮುಖದಲ್ಲಿ ಪೂಜಾ ವಿಧಿ ವಿಧಾನಗಳು ನೆರವೇರಿದವು.

ನಂತರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಬದುಕು ಆಧುನೀಕರಣಗೊಂಡಂತೆ ಮನುಷ್ಯರು ಆಧ್ಯಾತ್ಮಿಕದತ್ತ ವಾಲುತ್ತಿದ್ದಾರೆ. ಇಂದು ಎಲ್ಲರಿಗೂ ಮನಃಶಾಂತಿಯ ಅವಶ್ಯಕತೆ ಇದೆ. ಇಂತಹ ಮನಃಶಾಂತಿ ದೇವಾಲಯಗಳಿಂದ ದೊರಕುತ್ತದೆ. ಜನರು ತಮ್ಮ ಕರ್ತವ್ಯದೊಂದಿಗೆ ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿಕೊಳ್ಳಬೇಕು ಎಂದರು.

ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ದೈನಂದಿನ ಬದುಕಿನ ಜಂಜಾಟದ ನಡುವೆಯೂ ಭಗವಂತನ ಸ್ಮರಣೆಗಾಗಿ ಸಮಯವನ್ನು ಮೀಸಲಿಡ ಬೇಕು. ಗ್ರಾಮದಲ್ಲಿ ದೇವಾಲಯಗಳಿದ್ದ ಸಾಮರಸ್ಯ ನೆಲೆಗೊಳ್ಳುತ್ತದೆ ಎಂದು ಅಭಿಪ್ರಾಯಿಸಿದರು.

ಕಾರ್ಯಕ್ರಮದಲ್ಲಿ ದೇವಾಲಯ ಸಮಿತಿ ಅಧ್ಯಕ್ಷ ವೇದಾಂತಯ್ಯ, ಪದಾಧಿಕಾರಿಗಳಾದ ಜಯರಾಜ್, ದಯಾನಂದ್, ದಯಾಕರ್, ಪ್ರಶಾಂತ್‍ಕುಮಾರ್, ನಿವೃತ್ತ ಪ್ರಾಧ್ಯಾಪಕ ಧರ್ಮಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.