ಮಡಿಕೇರಿ, ಮಾ. 27: ಮೊಬೈಲ್ ಮೂಲಕ ಕೇರಳದ ಒಂದಂಕಿ ಲಾಟರಿಯನ್ನು ಆಡಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಮಡಿಕೇರಿ ನಗರ ಪೊಲೀಸರು ಬಂಧಿಸಿದ್ದಾರೆ.

ತ್ಯಾಗರಾಜ ಕಾಲೋನಿಯ ನಾಸೀರ್, ಚಾಮುಂಡೇಶ್ವರಿ ನಗರದ ಅಬ್ದುಲ್ ಮಜೀದ್, ಹೆಬ್ಬೆಟ್ಟಗೇರಿಯ ನಾರಾಯಣ ಎಂಬವರುಗಳನ್ನು ಚೌಕಿಯಲ್ಲಿ ಬಂಧಿಸಲಾಗಿದೆ. ಕಾರ್ಯಾಚರಣೆಯಲ್ಲಿ ನಗರ ಠಾಣಾಧಿಕಾರಿ ಷಣ್ಮುಗ, ಪ್ರೊಬೆಷನರಿ ಎಸ್‍ಐ ಶೇಷಾದ್ರಿ ಕುಮಾರ್, ಮುಖ್ಯ ಪೇದೆಗಳಾದ ದಿನೇಶ್, ಅರುಣ್, ಸಿಬ್ಬಂದಿ ಡಿ.ಕೆ. ಹರೀಶ್ ಪಾಲ್ಗೊಂಡಿದ್ದರು.