ಮಡಿಕೇರಿ, ಮಾ. 27: ಇಬ್ನಿವಳವಾಡಿ ಗ್ರಾಮದ ಭದ್ರಕಾಳಿ ದೇವರ ವಾರ್ಷಿಕೋತ್ಸವ, ಸಣ್ಣ ದೇವಸ್ಥಾನದಲ್ಲಿ ತಾ. 30 ರಂದು ಮಧ್ಯಾಹ್ನ 1 ಗಂಟೆಗೆ ಕೊಡಿಯಾಟ್, 2 ಗಂಟೆಗೆ ಪೀಲಿಯಾಟ್, 3 ಗಂಟೆಗೆ ಕೊಂಬಾಟ್, ನಂತರ ಭಂಡಾರ ಹಾಕುವದು ಮತ್ತು ಕಾಯಿಗೆ ಗುಂಡು ಹೊಡೆಯುವದು. ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಬಂದು ದೇವರ ಪ್ರಸಾದ ಸ್ವೀಕರಿಸಿ ಆಶೀರ್ವಾದ ಪಡೆಯಲು ಆಡಳಿತ ಮಂಡಳಿ ಕೋರಿದೆ.