ಮಡಿಕೇರಿ, ಮಾ. 27 : ತಾ. 30 ರಂದು ಸೋಮವಾರಪೇಟೆ ತಾಲೂಕಿನ 7ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಶಾಂತಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿತ್ತು. ಆದರೆ ಲೋಕಸಭಾ ಚುನಾವಣೆಯ ನೀತಿ ಸಂಹಿತೆಯ ಕಾರಣದಿಂದಾಗಿ ಸಮ್ಮೇಳನವನ್ನು ಚುನಾವಣೆಯ ನಂತರ ಸೂಕ್ತ ದಿನಾಂಕದಂದು ನಡೆಸಲಾಗುವದು ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎಸ್.ಲೋಕೇಶ್ಸಾಗರ್ ತಿಳಿಸಿದ್ದಾರೆ.