ಗೋಣಿಕೊಪ್ಪ ವರದಿ, ಮಾ. 27: ಇಲ್ಲಿನ ಕಾವೇರಿ ಕಾಲೇಜು ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗದಿಂದ ಆಯೋಜಿಸಿದ್ದ ರಾಜ್ಯಮಟ್ಟದ ಅರ್ಥಶಾಸ್ತ್ರ ಹಬ್ಬದಲ್ಲಿ 4 ವಿಭಾಗಗಳಲ್ಲಿ ಬಹುಮಾನ ಗಳಿಸಿದ ಮೈಸೂರು ಮಹಾಜನಾಸ್ ಕಾಲೇಜು ತಂಡಕ್ಕೆ ಸಮಗ್ರ ಪ್ರಶಸ್ತಿ ಪಡೆಯುವ ಮೂಲಕ ಚಾಂಪಿಯನ್ ತಂಡವಾಗಿ ಹೊರ ಹೊಮ್ಮಿತು.
ಕಾಲೇಜು ಆವರಣದಲ್ಲಿರುವ ಚೆಕ್ಕೇರ ಮುತ್ತಣ್ಣ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸ ಲಾಗಿದ್ದ ಕಾರ್ಯಕ್ರಮದಲ್ಲಿ ಮೈಸೂರು ಮಹಾಜನಾಸ್ ಕಾಲೇಜು ತಂಡವು ಜನಪದ ನೃತ್ಯ, ಕಿರು ಪ್ರಹಸನ, ಮಾದರಿ ಪ್ರದರ್ಶನ, ರಸಪ್ರಶ್ನೆ ವಿಭಾಗಗಳಲ್ಲಿ ಬಹುಮಾನ ಗಳಿಸುವ ಮೂಲಕ ಈ ಸಾಧನೆ ಮಾಡಿತು.
ಫಲಿತಾಂಶ: ಜನಪದ ನೃತ್ಯ ಸ್ಪರ್ಧೆಯಲ್ಲಿ ಪುತ್ತೂರು ಸೆಂಟ್ ಫಿಲೋಮಿನಾ ಕಾಲೇಜು ತಂಡ ಪ್ರಥಮ, ಮೈಸೂರು ಮಹಾಜನಾಸ್ ಕಾಲೇಜು ದ್ವಿತೀಯ, ಕಿರು ಪ್ರಹಸನ ಸ್ಪರ್ಧೆಯಲ್ಲಿ ಮಹಾಜನಾಸ್ ಕಾಲೇಜು ಪ್ರಥಮ, ಪುತ್ತೂರು ಸೆಂಟ್ ಫಿಲೋಮಿನ ಕಾಲೇಜು ದ್ವಿತೀಯ,
ಮಾದರಿ ಪ್ರದರ್ಶನ ಸ್ಪರ್ಧೆಯಲ್ಲಿ ಮಹಾಜನಾಸ್ ಕಾಲೇಜು ಪ್ರಥಮ, ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದ್ವಿತೀಯ, ರಸಪ್ರಶ್ನೆ ಸ್ಪರ್ಧೆಯಲ್ಲಿ ಮಹಾಜನಾಸ್ ಕಾಲೇಜು ಪ್ರಥಮ, ಸೆಂಟ್ ಫಿಲೋಮಿನ ಕಾಲೇಜು ದ್ವಿತೀಯ ಸ್ಥಾನ ಪಡೆದುಕೊಂಡಿತು.
ನಿಧಿಶೋಧ ಸ್ಪರ್ಧೆಯಲ್ಲಿ ಪುತ್ತೂರು ಸೆಂಟ್ ಫಿಲೋಮಿನಾ ಕಾಲೇಜು ಏಕಮಾತ್ರ ಪ್ರಶಸ್ತಿ ಪಡೆದು ಕೊಂಡಿತು. ಎಲ್ಲಾ ವಿಭಾಗಗಳಲ್ಲೂ ಉತ್ತಮ ಪ್ರದರ್ಶನ ತೋರಿದ ಮೈಸೂರಿನ ಮಹಾಜನಾಸ್ ಕಾಲೇಜು ಸಮಗ್ರ ಪ್ರಶಸ್ತಿ ಪಡೆದುಕೊಳ್ಳುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿತು.
ಉದ್ಯಮಿ ಮಚ್ಚಮಾಡ ಅನೀಸ್ ಮಾದಪ್ಪ ಉದ್ಘಾಟಿಸಿದರು. ಈ ಸಂದರ್ಭ ಕಾವೇರಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ಡಾ. ಎ.ಸಿ. ಗಣಪತಿ, ವೀರಾಜಪೇಟೆ ಕಾವೇರಿ ಕಾಲೇಜು ಪ್ರಾಂಶುಪಾಲ ಪ್ರೊ. ಎ.ಎಂ. ಕಮಲಾಕ್ಷಿ, ಕಾವೇರಿ ಎಜುಕೇಷನ್ ಸೊಸೈಟಿ ನಿರ್ದೇಶಕಿ ಡಾ. ಪೊನ್ನಮ್ಮ ಮಾಚಯ್ಯ, ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ. ಟಿ.ಕೆ. ಬೋಪಯ್ಯ ಉಪಸ್ಥಿತರಿದ್ದರು.
ಸಮಾರೋಪದಲ್ಲಿ ಕಾವೇರಿ ಎಜುಕೇಷನ್ ಸೊಸೈಟಿ ನಿರ್ದೇಶಕಿ ಡಾ. ಪೊನ್ನಮ್ಮ ಮಾಚಯ್ಯ, ಪ್ರಭಾರ ಪ್ರಾಂಶುಪಾಲ ಪ್ರೊ. ಕೆ.ವಿ. ಕುಸುಮಾಧರ್, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಬೆನಡಿಕ್ಟ್ ಸಾಲ್ಡಾನ, ಉಪನ್ಯಾಸಕರುಗಳಾದ ಸಿ.ಎಂ. ಕಿರಣ್ ಹಾಗೂ ಜಿ. ಪವಿತ್ರ ಬಹುಮಾನ ವಿತರಿಸಿದರು.
- ಸುದ್ದಿಪುತ್ರ