ಮಡಿಕೇರಿ, ಮಾ. 27: ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ದಿನಾಚರಣೆಯನ್ನು ಪ್ರತಿವರ್ಷದಂತೆ ಈ ವರ್ಷವೂ ಏ. 2 ರಂದು ಪೊಲೀಸ್ ಕವಾಯತು ಮೈದಾನದಲ್ಲಿ ಆಚರಿಸಲಾಗುತ್ತಿದೆ. ಈ ಸಲ ನಿವೃತ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಸಲುವಾಗಿ ಅವರಿಗೆ ಗೋಣಿಕೊಪ್ಪ, ವೀರಾಜಪೇಟೆ, ಕುಶಾಲನಗರ ಮತ್ತು ಮಡಿಕೇರಿ ನಗರದಿಂದ ವಾಹನ ಸೌಕರ್ಯವನ್ನು ಏರ್ಪಡಿಸಲಾಗಿದೆ. ಆ ದಿವಸ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕಿ ಸುಮನ್ ಡಿ.ಪಿ. ಅವರು ನಿವೃತ್ತರ ಕುಂದುಕೊರತೆಗಳನ್ನು ವಿಚಾರಿಸುವರು. ನಿವೃತ್ತ ಪೊಲೀಸರು ಮತ್ತು ಅವರ ಅವಲಂಬಿತರು ಹೆಚ್ಚಿನ ಸಂಖ್ಯೆಯಲ್ಲಿ ಧ್ವಜ ದಿನಾಚರಣೆಯ ದಿವಸ ಹಾಜರಾಗುವಂತೆ ನಿವೃತ್ತರ ಸಂಘದ ಅಧ್ಯಕ್ಷರು ಕೋರಿದ್ದಾರೆ.