ವೀರಾಜಪೇಟೆ, ಮಾ. 26: ನಗರದ ಬಂಗಾಳಿ ಬೀದಿಯಲ್ಲಿ ವಾಸವಿರುವ ಸಿ.ಎಂ.ಅಬ್ದುಲ್ಲಾ ಎಂಬವರು ತಮ್ಮ 30 ವರ್ಷದ ಪುತ್ರ ರಫೀಖ್ ಎಂಬವರು ಕಳೆದ 8 ದಿನಗಳ ಹಿಂದೆ ಮನೆಯಿಂದ ಕಾಣೆಯಾಗಿದ್ದು, ಈತನನ್ನು ಪತ್ತೆ ಹಚ್ಚಿಕೊಡಬೇಕೆಂದು ನಗರ ಪೋಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಸರಾಸರಿ ಮೈಕಟ್ಟು ಹೊಂದಿದ್ದಾನೆ. ಪಿಂಕ್ ಕಲರ್‍ನ ಶರ್ಟ್ ಹಾಗೂ ಲುಂಗಿ ಧರಿಸಿರುತಾನೆ. ಕನ್ನಡ, ಮಲಯಾಳಿ ಹಾಗೂ ಕೊಡವ ಭಾಷೆಯಲ್ಲಿ ಮಾತನಾಡ ಬಲ್ಲವನಾಗಿದ್ದು ಈತನ ಕುರಿತು ಮಾಹಿತಿ ಅಥವಾ ಪತ್ತೆ ಹಚ್ಚಿದಲ್ಲಿ ವಿರಾಜಪೇಟೆ ನಗರ ಪೋಲೀಸ್ ಠಾಣೆಯಲ್ಲಿ ಅಥವಾ 9449896948 ಎಂಬ ದೂರವಾಣಿ ಸಂಖ್ಯೆಯಲ್ಲಿ ಸಂಪರ್ಕಿಸುವಂತೆ ಕೋರಲಾಗಿದೆ.