ಚೆಟ್ಟಳ್ಳಿ, ಮಾ. 26: ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಜನವರಿ ತಿಂಗಳಲ್ಲಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ನಡೆಸಿದ ಕಾನ್ಫಿಡೆನ್ಸ್ ಟೆಸ್ಟ್‍ನಲ್ಲಿ ಸಿದ್ದಾಪುರ ಸಂತ ಅನ್ನಮ್ಮ ಪ್ರೌಢಶಾಲಾ ವಿದ್ಯಾರ್ಥಿನಿ ಕೀರ್ತನಾ ಗಿರೀಶ್ ಪ್ರಥಮ ಸ್ಥಾನವನ್ನು ಹಾಗೂ ಕೊಡಗು ಜಿಲ್ಲೆಗೆ ದ್ವಿತೀಯ ಸ್ಥಾನವನ್ನು ಇದೇ ಶಾಲೆಯ ಫಾತಿ ಮತ್ತು ಸಹಲ ಪಡೆದಿದ್ದಾರೆ ಎಂದು ಸಿದ್ದಾಪುರ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ನಿಜಾಬ್ ತಿಳಿಸಿದ್ದಾರೆ.

ಸಿದ್ದಾಪುರ ಸೆಕ್ಟರ್ ವತಿಯಿಂದ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಈ ಸಂದರ್ಭ ಜಿಲ್ಲಾ ಎಸ್.ಎಸ್.ಎಫ್. ಪ್ರಧಾನ ಕಾರ್ಯದರ್ಶಿ ಮುಸ್ತಫಾ, ಸಿದ್ದಾಪುರ ಸೆಕ್ಟರ್ ಅಧ್ಯಕ್ಷ ರಜಾಕ್ ಸಹದಿ, ಉಪಾಧ್ಯಕ್ಷ ವಿ.ಪಿ.ಎಸ್. ತಂಙಲ್, ಕಂಡಕರೆ ಅಧ್ಯಕ್ಷ ಹಂಸ ರಹ್ಮಾನಿ ಇದ್ದರು.