ಮಡಿಕೇರಿ, ಮಾ. 26: ತಾಲೂಕಿನ ಹುಲಿತಾಳದ ಭಗತ್ ಯುವಕ ಸಂಘ, ನೆಹರೂ ಯುವ ಕೇಂದ್ರ, ಯುವ ಸಬಲೀಕರಣ ಕ್ರೀಡಾ ಇಲಾಖೆ, ಜಿಲ್ಲಾ ಮತ್ತು ತಾಲೂಕು ಯುವ ಒಕ್ಕೂಟಗಳ ಆಶ್ರಯದಲ್ಲಿ ಹುಲಿತಾಳದ ಸಮುದಾಯ ಭವನದಲ್ಲಿ ಬಲಿದಾನ ದಿವಸವನ್ನು ಆಚರಿಸಲಾಯಿತು. ಸ್ಥಳೀಯ ಪ್ರಗತಿಪರ ಕೃಷಿಕ ಬಿ.ಎಸ್. ಸಂಜೀವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮರಗೋಡು ಭಾರತಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಶಿಕ್ಷಕ ಪಿ.ಎಸ್. ರವಿಕೃಷ್ಣ ದಿನದ ಮಹತ್ವದ ಕುರಿತು ಉಪನ್ಯಾಸ ನೀಡಿ, 1931 ರ ಮಾರ್ಚ್ 23 ರಂದು ಭಗತ್ ಸಿಂಗ್, ರಾಜಗುರು, ಸುಖ್ ದೇವ್ ಅವರನ್ನು ಬ್ರಿಟಿಷರು ಲಾಹೋರ್‍ನಲ್ಲಿ ನೇಣಿಗೇರಿಸಿದರು. ಅವರ ಹಾಗೂ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮಹನೀಯರನ್ನು ಸ್ಮರಿಸುವದೇ ಬಲಿದಾನ ದಿವಸದ ಉದ್ದೇಶವಾಗಿದೆ ಎಂದರು.
ದೇಶಕ್ಕಾಗಿ ಪ್ರಾಣಬಿಟ್ಟ ಅಮೂಲ್ಯ ರತ್ನಗಳನ್ನು ಸ್ಮರಿಸುತ್ತಾ ದೇಶದ ಬಗ್ಗೆ ಚಿಂತಿಸುವಂತೆ ಮಾಡಬೇಕಾಗಿದೆಯೆಂದು ಅಭಿಪ್ರಾಯಪಟ್ಟರು. ವೇದಿಕೆಯಲ್ಲಿ ಭಗತ್ ಯುವಕ ಸಂಘದ ಅಧ್ಯಕ್ಷ ಹೆಚ್.ಎ.ಂ ವಿನೋದ್, ಉಪಾಧ್ಯಕ್ಷ ಪಿ. ಗೌತಮ್, ಕಾರ್ಯದರ್ಶಿ ಹೆಚ್.ಎಸ್. ನಂದಕುಮಾರ್ ಉಪಸ್ಥಿತರಿದ್ದರು.