ಸೋಮವಾರಪೇಟೆ, ಮಾ. 25: ಇಲ್ಲಿನ ವಾಹನ ಚಾಲಕರು ಹಾಗೂ ಮೋಟಾರು ಕೆಲಸಗಾರರ ಸಂಘದ ವಾರ್ಷಿಕ ಮಹಾಸಭೆ ಸ್ಥಳೀಯ ಕೊಡವ ಸಮಾಜದಲ್ಲಿ ಸಂಘದ ಅಧ್ಯಕ್ಷ ಸಿ.ಸಿ. ನಂದರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ನೂತನ ಸಾಲಿಗೆ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಸಂಘಕ್ಕೆ ನೂತನ ಕಚೇರಿ ನಿರ್ಮಿಸುವ ಸಂಬಂಧ ಈಗಾಗಲೇ ನಿವೇಶನಕ್ಕೆ ಕ್ರಮ ಕೈಗೊಳ್ಳಲಾಗಿರುವ ಬಗ್ಗೆ ಸಂಘದ ಅಧ್ಯಕ್ಷರು ಸಭೆಯ ಗಮನ ಸೆಳೆದರು. ಸ್ಥಳಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ಹಿಂದಿನ ಸಾಲಿನ ಅಧ್ಯಕ್ಷರೇ ಮುಂದುವರೆಸುವಂತೆ ಸಭೆ ತೀರ್ಮಾನಿಸಿತು.
ಸಭೆಯಲ್ಲಿ ಮಾಜೀ ಅಧ್ಯಕ್ಷ ಸಿ.ಸಿ. ನಂದ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಉಪಾಧ್ಯಕ್ಷ ಪರಮೇಶ್, ಕಾರ್ಯದರ್ಶಿ ಬಾಲಕೃಷ್ಣ ರೈ, ಖಜಾಂಚಿ ಖಾದರ್, ಪ್ರಮುಖರಾದ ಎ.ಆರ್. ಭರತ್, ಎಂ.ವಿ. ಡಾಮಿನಿಕ್, ಬಿ.ವಿ. ರಂಗಸ್ವಾಮಿ, ಎ.ಪಿ. ವೀರರಾಜು, ಕೆ.ಜಿ. ಸುರೇಶ್, ರಮೇಶ್ ಮತ್ತಿತರರು ಉಪಸ್ಥಿತರಿದ್ದರು.