ಶನಿವಾರಸಂತೆ, ಮಾ. 25: ಶನಿವಾರಸಂತೆಯ ಚಿನ್ನಳ್ಳಿ ರಸ್ತೆಯ ಪಕ್ಕದಲ್ಲಿರುವ ಶನಿವಾರಸಂತೆ ಕಟ್ಟಡ ಕಾರ್ಮಿಕರ ಸಂಘದ ನೂತನ ಕಚೇರಿಯನ್ನು ಕಾರ್ಮಿಕರ ಸಂಘಟನೆಯ ರಾಜ್ಯಾಧ್ಯಕ್ಷ ಬೆಂಗಳೂರಿನ ಬಿ. ದೇವರಾಜ್ ಉದ್ಘಾಟಿಸಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ಕಾರ್ಯದರ್ಶಿ ರಾಮ್‍ಪ್ರಕಾಶ್, ಶನಿವಾರಸಂತೆ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ರತ್ನಾಕರ್ ಆಚಾರ್, ಉಪಾಧ್ಯಕ್ಷ ಪ್ರಕಾಶ್, ಕಾರ್ಯದರ್ಶಿ ಎಸ್.ಆರ್. ಪಾಲಾಕ್ಷ, ಪದಾಧಿಕಾರಿಗಳಾದ ನಿಂಗಪ್ಪ, ಸತೀಶ್, ಶರೀಫ್, ಎಸ್.ಪಿ. ಲೋಕೇಶ್, ಸಾಧಿಕ್, ಎಸ್.ಬಿ. ರವಿ, ಎಂ.ಜೆ. ವಿಠಲ್, ನಾಗರಾಜ್, ಮನು ಇತರರು ಹಾಜರಿದ್ದರು.