ಮಡಿಕೇರಿ, ಮಾ. 24: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಂಗ ಸಂಸ್ಥೆಯಾಗಿರುವ ಇಲ್ಲಿನ ಇನ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ವತಿಯಿಂದ ನಡೆಸುತ್ತಿರುವ ಡಿಪ್ಲೊಮಾ ಇನ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿಯಲ್ಲಿ ಕಾವೇರಮ್ಮ ಎನ್.ಟಿ. 4ನೇ ರ್ಯಾಂಕ್ ಹಾಗೂ ಉದಯ ಎಂ.ಡಿ. 10ನೇ ರ್ಯಾಂಕ್‍ನ್ನು ಪಡೆದಿದ್ದಾರೆ. ತರಬೇತಿ ಸಂಸ್ಥೆಯಲ್ಲಿ ಶೇ. 100 ರಷ್ಟು ಫಲಿತಾಂಶ ದೊರೆತಿದೆ ಎಂದು ಸಂಸ್ಥೆಯ ಪ್ರಾಂಶುಪಾಲ ಪುಟ್ಟಸ್ವಾಮಿ ತಿಳಿಸಿದ್ದಾರೆ.