ವೀರಾಜಪೇಟೆ, ಮಾ. 23: ವಾರ್ಷಿಕ ತೆರೆ ಮಹೋತ್ಸವಗಳು ಸಾಗಿ ವಜ್ರ ಮಹೋತ್ಸವ ದೊಂದಿಗೆ ಶ್ರೀ ಚೈತನ್ಯ ಮಠಪುರ ಮುತ್ತಪ್ಪ ಉತ್ಸವ ಸಂಪ್ರದಾ ಯದಂತೆ ಮೂರು ದಿನಗಳ ಧಾರ್ಮಿಕ ಕಾರ್ಯಕ್ರಮ ಗಳೊಂದಿಗೆ ಸಂಪನ್ನ ಗೊಂಡಿತು.
ವೀರಾಜಪೇಟೆ ಮಲಬಾರ್ ರಸ್ತೆಯಲಿ ್ಲರುವ ಶ್ರೀ ಚೈತನ್ಯ ಮಠಪುರ ಮುತ್ತಪ್ಪ ದೇವಾಲಯದ ವಾರ್ಷಿಕ ಮಹೋತ್ಸವ ಹಲವು ಧಾರ್ಮಿಕ ಕಾರ್ಯಕ್ರಮ ಗಳೊಂದಿಗೆ ಸಂಪನ್ನ ಗೊಂಡಿತು. ದೇವಾಲಯವು 1944 ರಲ್ಲಿ ಸ್ಥಾಪನೆ ಗೊಂಡು ವಾರ್ಷಿಕ ತೆರೆ ಉತ್ಸವಾದಿಗಳನ್ನು ನಡೆಸಿಕೊಂಡು ಬರಲಾಗುತ್ತಿದ್ದು, ಇಂದು ವಜ್ರ ಮಹೋತ್ಸವ ಅಚರಣೆಯನ್ನು ಸಂಭ್ರಮ ಸಡಗರದಿಂದ ಅಚರಿಸಲಾಯಿತು. ಮೊದಲ ಕಳಶವು ಸುಂಕದಟ್ಟೆಯಿಂದ ಹೊರಟು ಮೆರವಣಿಗೆಯಲ್ಲಿ ಸಿಂಗಾರಿ ಮೇಳಂ, ಮಯಿಲ್ ಅಟಂ, ಮತ್ತು ದೀಪದ ಬೆಳಕನ್ನು ಹೊತ್ತು ಸಾಗಿದ ತಾಲಪೊಲಿ ಮೆರುಗು ನೀಡಿದವು. ನಂತರದಲ್ಲಿ ಪಂಜರ್‍ಪೇಟೆ, ನೆಹರು ನಗರ ಮತ್ತು ಕಲ್ಲುಬಾಣೆಯ ಕಳಶಗಳು ದೇವಾಲಯಕ್ಕೆ ಅಗಮಿಸಿದವು. ದೇವಾಲಯದಲ್ಲಿ ಮುತ್ತಪ್ಪನ್ ವೆಳ್ಳಾಟಂ, ಕುಟ್ಟಿಚಾತನ್, ಗುಳಿಗನ್, ವಸೂರಿಮಾಲ, ಪೋದಿ, ವಿಷ್ಣುಮೂರ್ತಿ ವೆಳ್ಳಾಟಂ ನಡೆಯಿತು. ರಾತ್ರಿ ಆಕರ್ಷಕ ಸಿಡಿಮದ್ದು ಪ್ರದರ್ಶನ, ಶಾಸ್ತಪ್ಪನ್, ತಿರುವಪ್ಪನ್, ಭಗವತಿ, ವಸೂರಿಮಾಲ, ವಿಷ್ಣುಮೂರ್ತಿ ತೆರೆಗಳು ತೆರೆಕಂಡು ಭಕ್ತರಿಗೆ ಶ್ರೀ ಹಸ್ತವನ್ನು ನೀಡಿದವು. ವಿಷ್ಣುಮೂರ್ತಿ ಕೋಲದೊಂದಿಗೆ ವಾರ್ಷಿಕ ಮಹೋತ್ಸವವು ತೆರೆಕಂಡಿತು.
ಈ ಸಂದರ್ಭದಲ್ಲಿ ದೇವಾಲಯದ ಅಧ್ಯಕ್ಷ ಇ.ಸಿ. ಜೀವನ್ ಮಾತನಾಡಿ, ದೇಗುಲದಲ್ಲಿ ಪ್ರತಿ ತಿಂಗಳ 15 ಮತ್ತು 30 ರಂದು ಹಾಗೂ ಸಂಕ್ರಮಣ ದಿನದಂದು ಮುತ್ತಪ್ಪ ವೆಳ್ಳಾಟಂ ನಡೆಸಿಕೊಂಡು ಬರಲಾಗುತ್ತಿದ್ದು, ಭಕ್ತರ ಸಹಾಕಾರದಿಂದ ದೇಗುಲವು ಅಭಿವೃದ್ಧಿ ಕಾಣುತ್ತಿದೆ ಎಂದು ಹೇಳಿದರು.
ದೇಗುಲದಲ್ಲಿ ಮೂರು ದಿನಗಳ ಕಾಲ ಸಮಿತಿ ವತಿಯಿಂದ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಅಡಳಿತ ಮಂಡಳಿಯ ಸದಸ್ಯರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಅಗಮಿಸಿ ದೈವ ದರ್ಶನ ಪಡೆದು ಪುನೀತರಾದರು.
-ಕೆ.ಕೆ.ಎಸ್ ವೀರಾಜಪೇಟೆ