ಸಿದ್ದಾಪುರ, ಮಾ. 23: ನೆಲ್ಲಿಹುದಿಕೇರಿ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಸತ್ಯನಾರಾಯಣ ದೇವರ ವಾರ್ಷಿಕೋತ್ಸವ ಹಾಗೂ ಪೂಜಾ ಕೈಂಕರ್ಯಗಳು ವಿಜೃಂಭಣೆಯಿಂದ ನಡೆಯಿತು. ಶುದ್ಧ ಕಲಶ, ದೇವರ ಬಲಿ, ಮಹಾಪೂಜೆ ಪಟ್ಟಣಿ, ಪೋದಮ್ಮ ದೇವಾಲಯದಲ್ಲಿ ಸಂಜೆ ಅಕ್ಕಿ ಹೇರುವದು, ದೇವರ ಮೆರವಣಿಗೆ ನಂತರ ಮಹಾ ಮಂಗಳಾರತಿ ನಡೆಯಿತು. ಸಾಮೂಹಿಕ ಸತ್ಯ ನಾರಾಯಣ ಪೂಜೆ, ಮಹಾಪೂಜೆ, ತೆಂಗಿನಕಾಯಿಗೆ ಗುಂಡು ಹೊಡೆಯುವದು, ದೇವರ ಬಲಿ, ಅವಭೃತ ಸ್ನಾನ, ದೇವರ ಪ್ರದಕ್ಷಿಣೆ, ರಾತ್ರಿ ಮಹಾಮಂಗಳಾರತಿ ನಂತರ ಅನ್ನಸಂತರ್ಪಣೆ ನಡೆಯಿತು.