ಚೆಟ್ಟಳ್ಳಿ, ಮಾ. 21: ಕಳೆದ ಮಹಾಮಳೆಗೆ ಹಾನಿಗೊಳಗಾದ ಹತ್ತು ಸಂತಸ್ತರ ಮನೆಗಳಿಗೆ ಚೆಟ್ಟಳ್ಳಿ ವಿನಾಯಕ ರಿಕ್ರಿಯೇಶನ್ ಕ್ಲಬ್ ವತಿಯಿಂದ ಸೋಲಾರ್ ದೀಪ ವಿತರಿಸಲಾಯಿತು.

ಚೆಟ್ಟಳ್ಳಿಯ ವಿನಾಯಕ ರಿಕ್ರಿಯೇಶನ್ ಕ್ಲಬ್ ವತಿಯಿಂದ ಆಡಳಿತ ಮಂಡಳಿ ಹಾಗೂ ಸದಸ್ಯರಿಂದ ಹಣ ಸಂಗ್ರಹಿಸಿ ಹತ್ತು ಸೋಲಾರ್ ದೀಪವನ್ನು ಖರೀದಿಸಿ ಕಾಲೂರಿನ ಸಿ.ಪಿ. ಲೀಲಾವತಿ, ಕುಕ್ಕೆರ ವಸಂತ ಗೌಡ, ಕುಕ್ಕೇರ ದಿಲೀಪ್ ಗೌಡ, ಚೆನ್ನಪಂಡ ಮಹೇಶ್ ದೇವಯ್ಯ, ಲೋಕೇಶ್ ಸಿ. ಕುಂಬಾರಗಡಿಗೆಯ ಕೆ.ಟಿ. ಸುಬ್ಬಯ್ಯ, ತಂಬುಕುತ್ತಿರ ಮುತ್ತಣ್ಣ, ಹಚ್ಚಿನಾಡುವಿನ ತಂಬುಕುತ್ತಿರ ನಂಜುಂಡ, ಗರ್ವಾಲೆಯ ತಾಚಮಂಡ ಲೀಲಾವತಿ ಹಾಗೂ ಮುಕೋಡ್ಲುವಿನ ತಡಿಯಪನ ಕುಶಾಲಪ್ಪನವರಿಗೆ ನೀಡಲಾಯಿತು.

ಈ ಸಂದರ್ಭ ವಿನಾಯಕ ರಿಕ್ರಿಯೇಶನ್ ಕ್ಲಬ್‍ನ ಉಪಾಧ್ಯಕ್ಷ ದಂಬೆಕೊಡಿ ಹರೀಶ್, ಖಜಾಂಚಿಗಳಾದ ಕೆಚ್ಚೆಟಿರ ಡಿಕ್ಕಿ ಅಪ್ಪಯ್ಯ, ಬಲ್ಲಾರಂಡ ಹರೀಶ್ ತಮ್ಮಯ್ಯ, ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ, ಜಂಟಿ ಕಾರ್ಯದರ್ಶಿ ಚೋಳಪಂಡ ವಿಜಯ, ನಿರ್ದೇಶಕರಾದ ಪುತ್ತರಿರ ಪಪ್ಪು ತಿಮ್ಮಯ್ಯ, ಕೊಂಗೇಟಿರ ಲೋಕೇಶ್ ಅಚ್ಚಪ್ಪ, ಸದಸ್ಯ ಮತ್ರಂಡ ಬಿದ್ದಪ್ಪ ಹಾಜರಿದ್ದರು.