ವೀರಾಜಪೇಟೆ, ಮಾ. 21: ಕೊಡಗು ಎಚ್.ಡಿ.ಕೋಟೆ ಗಡಿಭಾಗದಲ್ಲಿ ಜಿಂಕೆ ಚರ್ಮವನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಎಚ್.ಡಿ.ಕೋಟೆ ಕಾರಾಪುರದ ಎಸ್. ಶ್ರೀನಿವಾಸ್ (27) ಎಂಬಾತನನ್ನು ಕೊಡಗು ಅರಣ್ಯ ಸಂಚಾರಿ ಸಿ.ಐ.ಡಿ.ಘಟಕದ ತಂಡ ಚರ್ಮ, ಬೈಕ್ ಸಮೇತ ಬಂಧಿಸಿದೆ. ಈತನ ಸಂಬಂಧಿ ಎಡತೊರೆಯ ಪ್ರಸನ್ನ ಎಂಬಾತ ತಲೆ ಮರೆಸಿಕೊಂಡಿರುವದಾಗಿ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಮಡಿಕೇರಿ ಅರಣ್ಯ ಸಂಚಾರಿ ದಳದ ಸಿ.ಐ.ಡಿ ಘಟಕದ ಅಧೀಕ್ಷಕ ಪ್ರಭಾಕರ್ ಭಾರ್ಗಿ ಅವರ ಮಾರ್ಗದರ್ಶನದಲ್ಲಿ ಸಂಚಾರಿ ದಳದ ಕೆ.ಬಿ.ಸೋಮಣ್ಣ, ಟಿ.ಪಿ.ಮಂಜುನಾಥ್, ಎನ್.ಬಿ.ಗಣೇಶ್, ಪಿ.ಬಿ.ಮೊಣ್ಣಪ್ಪ ಹಾಗೂ ರೇವಪ್ಪ ಪಾಲ್ಗೊಂಡಿದ್ದರು. ಕಬಿನಿ ಜಲಾಶಯದ ಬಳಿಯಿರುವ ಕಾರಾಪುರ ಅರಣ್ಯದಲ್ಲಿ ಜಿಂಕೆಯನ್ನು ಇಬ್ಬರು ಬೇಟೆಯಾಡಿದ್ದರೆಂದು ತನಿಖೆಯಿಂದ ತಿಳಿದು ಬಂದಿದೆ.