ಸೋಮವಾರಪೇಟೆ, ಮಾ. 22: ಪಟ್ಟಣದ ಜಯವೀರಮಾತೆ ಚರ್ಚ್‍ನಲ್ಲಿ ಅಂತಾರ್ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಧರ್ಮಗುರು ಟೆನ್ನಿ ಕುರಿಯನ್ ಕಾರ್ಯಕ್ರಮ ಉದ್ಘಾಟಿಸಿದರು.

ಧರ್ಮಗುರು ಎಂ. ರಾಯಪ್ಪ ದಿನದ ಮಹತ್ವದ ಬಗ್ಗೆ ಮಾತನಾಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಿಲ್‍ಡ್ರೆಡ್ ಗೋನ್ಸಾಲ್ವೆಸ್, ಶೀಲಾ ಡಿಸೋಜ, ಗ್ಲಾಡಿ ಡಿಸೋಜ, ಜ್ಯೋತಿ ರಿಚರ್ಡ್, ಮಿಲನಾಭರತ್, ತ್ರಿಶ, ಶರ್ಮಿಳಾ ಫರ್ನಾಂಡಿಸ್, ಫ್ಲೋರಾ ಡಿಸೋಜ, ಥರೇಸಾ ಡಿಸೋಜ, ಸಿಸ್ಟರ್ ಶೆರಿನ್ ಅವರುಗಳನ್ನು ಸನ್ಮಾನಿಸಲಾಯಿತು.

ಜ್ಯೋತಿ ಮಿಸ್, ಜೆಸಿಂತಾ ಸಿಕ್ವೇರ, ಜೂಲಿಯನ್ ಲೋಬೊ, ಮಮತಾ ಸಂತೋಷ್ ಕಾರ್ಯಕ್ರಮ ನಿರ್ವಹಿಸಿದರು. ನಂತರ ಮನರಂಜನಾ ಕಾರ್ಯಕ್ರಮ ನಡೆಯಿತು.