*ಗೋಣಿಕೊಪ್ಪಲು, ಮಾ. 22 : ಕಾರ್ಯಕರ್ತರ ಒಗ್ಗಟ್ಟಿನಿಂದ ಅಭಿವೃದ್ಧಿಯ ದೇಶ ಕಟ್ಟಲು, ಉತ್ತಮ ಸರ್ಕಾರ ರಚಿಸಲು ಸಾಧ್ಯವಿದೆ ಎಂದು ಕೊಡಗು,ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಹೇಳಿದರು.

ತಿತಿಮತಿ ಕಾವೇರಿ ಭವನದಲ್ಲಿ ಮಾಯಮುಡಿ, ದೇವರಪುರ, ತಿತಿಮತಿ ಗ್ರಾಮಗಳ ಸ್ಥಾನೀಯ ಸಮಿತಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ದೇಶ ಶಾಂತಿಯುತವಾಗಿ ಇರಲು ಮೋದಿ ಸರ್ಕಾರ ಅವಶ್ಯಕತೆ ಇದೆ. ಜನರಿಗೆ ಸೌಲಭ್ಯಗಳನ್ನು ಒದಗಿಸಿ ಕೊಡುವಲ್ಲಿ ಕಳೆದ ಐದು ವರ್ಷಗಳಿಂದ ಎನ್.ಡಿ.ಎ ಸರ್ಕಾರ ಸಮರ್ಪಕವಾಗಿ ಕಾರ್ಯ ನಿರ್ವಹಿಸಿದೆ. ವಿದೇಶಗಳಲ್ಲಿ ಇಂದು ಭಾರತ ಮುಂಚೂಣಿಯಲ್ಲಿದ್ದು, ಪ್ರಪಂಚವೇ ಭಾರತವನ್ನು ಗೌರವದಿಂದ ಕಾಣುತ್ತಿದೆ ಎಂದರು.

ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ ಮೊದಲು ದೇಶ ನಂತರವೇ ನಾನು ಎಂಬ ಧ್ಯೇಯ ಹೊಂದಿರುವ ಏಕೈಕ ಪಕ್ಷ ನಮ್ಮದು. ದೇಶ ಕಟ್ಟಲು ಮೋದಿ ಸರ್ಕಾರದ ಬಲ ಹೊಂದಬೇಕು. ಕಾರ್ಯಕರ್ತರು ಈ ಬಗ್ಗೆ ಜಾಗೃತರಾಗಿ ದೇಶದ ಹಿತಕ್ಕೆ ಉತ್ತಮ ನಿಲುವನ್ನು ಹೊಂದಿ ಒಗ್ಗಟ್ಟನ್ನು ಪ್ರದರ್ಶಿಸಬೇಕು ಎಂದು ಕರೆ ನೀಡಿದರು.

ಈ ಬಾರಿಯ ಲೋಕಸಭಾ ಚುನಾವಣೆ ಸವಾಲಿನಿಂದ ಕೂಡಿದೆ. ಜನ ಮೋದಿ ಸರ್ಕಾರದ ಆಡಳಿತದ ಬಗ್ಗೆ ಒಲವು ಹೊಂದಿದ್ದಾರೆ. ಹೀಗೆಂದು ಕಾರ್ಯಕರ್ತರು ನಿರ್ಲಕ್ಷ ಭಾವನೆ ತಾಳಬಾರದು ಎಂದು ಹೇಳಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಭಾರತೀಶ್ ಮಾತನಾಡಿ ಕಾರ್ಯಕರ್ತರು ಚುನಾವಣೆಯ ಬಗ್ಗೆ ನಿರ್ಲಕ್ಷ ಭಾವನೆ ತಾಳದೆ ಕಾರ್ಯಪ್ರವೃತರಾಗಬೇಕು ಎಂದು ಕರೆ ನೀಡಿದರು.

ಗೋವ ರಾಜ್ಯದ ಮುಖ್ಯಮಂತ್ರಿ ಮನೋಹರ್ ಪರಿಕರ್, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಬಾಲಚಂದ್ರ ಕಳಗಿ ಅವರ ನಿಧಾನಕ್ಕೆ ಸಂತಾಪ ವ್ಯಕ್ತಪಡಿಸಲಾಯಿತು. ತಾಲೂಕು ಬಿಜೆಪಿ ಮಂಡಳಿ ಅಧ್ಯಕ್ಷ ಅರುಣ್ ಭೀಮಯ್ಯ ಪ್ರಾಸ್ತವಿಕ ನುಡಿಗಳನ್ನಾಡಿದರು. ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಮಂಡೆಪಂಡ ಸುಜಾ ಕುಶಾಲಪ್ಪ, ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ತೀತಮಾಡ ಲಾಲ ಬೀಮಯ್ಯ, ಸುವಿನ್ ಗಣಪತಿ, ತಿತಿಮತಿ ಸ್ಥಾನೀಯ ಸಮಿತಿ ಅಧ್ಯಕ್ಷ ಎನ್.ಎನ್. ಅನುಪ್, ಮಾಯಮುಡಿ ಸ್ಥಾನೀಯ ಸಮಿತಿ ಅಧ್ಯಕ್ಷ ಲೋಕೇಶ್, ಜಿಲ್ಲಾ ಮಹಿಳಾ ಮೋರ್ಚ ಅಧ್ಯಕ್ಷ ಯಮುನಾ ಚಂಗಪ್ಪ, ತಾಲೂಕು ವರ್ತಕರ ಪ್ರಕೋಷ್ಠ ಅಧ್ಯಕ್ಷ ಚೆಪ್ಪುಡೀರ ಮಾಚಯ್ಯ, ಹಿರಿಯರಾದ ಕಾಳಪಂಡ ಸುದೀರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಂತಿ ಸತೀಶ್, ಉಪಾಧ್ಯಕ್ಷ ಪಟ್ರಪಂಡ ರಘುನಾಣಯ್ಯ, ಜಿ.ಪಂ ಸದಸ್ಯರುಗಳಾದ ಸಿ.ಕೆ. ಬೋಪಣ್ಣ, ಶಶಿ ಸುಬ್ರಮಣಿ, ಅಪ್ಪಡೇರಂಡ ಭವ್ಯ, ತಾ.ಪಂ ಉಪಾಧ್ಯಕ್ಷ ನೆಲ್ಲಿರ ಚಲನ್, ಜಿಲ್ಲಾ ಯುವ ಮೋರ್ಚ ಕಾರ್ಯದರ್ಶಿ ಗಪ್ಪು, ತಾಲೂಕು ಯುವ ಮೋರ್ಚ ಅಧ್ಯಕ್ಷ ಕುಟ್ಟಂಡ ಅಜಿತ್ ಕರುಂಬಯ್ಯ, ಆರ್.ಎಂ.ಸಿ ಅಧ್ಯಕ್ಷ ಅದೇಂಗಡ ವಿನು ಚಂಗಪ್ಪ, ಸದಸ್ಯರುಗಳಾದ ಗುಮ್ಮಟೀರ ಕಿಲನ್ ಗಣಪತಿ, ಮೋಹನ್‍ರಾಜ್, ತಿತಿಮತಿ ಸ್ಥಾನೀಯ ಸಮಿತಿ ಕಾರ್ಯದರ್ಶಿ ಹೆಚ್.ಬಿ. ಗಣೇಶ್, ಹಿರಿಯರಾದ ಎಂ.ಎನ್. ಕೃಷ್ಣ ಸೇರಿದಂತೆ ನೂರಾರು ಕಾರ್ಯಕರ್ತ ರು ಹಾಜರಿದ್ದರು.

ಬಾಳೆಲೆ, ಪೊನ್ನಪ್ಪಸಂತೆ, ನಿಟ್ಟೂರು, ಕಾನೂರು, ಕುಟ್ಟ, ನಾಲ್ಕೇರಿ, ಕೆ,ಬಾಡಗ, ಟೀ ಶೆಟ್ಟೀಗೇರಿ, ಶ್ರಿಮಂಗಲ, ಬಿರುನಾಣಿ, ಹುದಿಕೇರಿ, ಪೊನ್ನಂಪೇಟೆ,ಬಲ್ಯಮಂಡೂರು, ಕಿರುಗೂರು, ಗೋಣಿಕೊಪ್ಪ, ಅರುವತ್ತೋಕ್ಲು ಮತ್ತು ಹಾತೂರು ಗ್ರಾ.ಪಂ ವ್ಯಾಪ್ತಿಯ ಶಕ್ತಿ ಕೇಂದ್ರ ಸಭೆಗಳನ್ನು ನಡೆಸಲಾಯಿತು.