ಮಡಿಕೇರಿ, ಮಾ. 21: ಜಿಲ್ಲಾ ಅಬಕಾರಿ ಇಲಾಖೆಯ ವತಿಯಿಂದ ವಿವಿಧೆಡೆ ದಾಳಿ ನಡೆಸಿ 11.790 ಲೀ. ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ವೀರಾಜಪೇಟೆ ವಲಯ ಹೊಸಕೋಟೆ ಗ್ರಾಮದಲ್ಲಿ ಗಸ್ತು ಸಂದರ್ಭ 10 ಲೀ. ಕಳ್ಳಭಟ್ಟಿ ಸಾರಾಯಿಯನ್ನು ವಶಪಡಿಸಿಕೊಂಡು ಓರ್ವ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿದೆ. ಒಟ್ಟು 9 ಆರೋಪಿಗಳ ವಿರುದ್ಧ ಪ್ರಕರಣಗಳು ದಾಖಲಾಗಿದ್ದು, 2 ಘೋರ ಹಾಗೂ 9 ಇತರೆ ಪ್ರಕರಣಗಳು ದಾಖಲಾಗಿವೆ. ವಶಪಡಿಸಿಕೊಂಡ ಮದ್ಯದ ಅಂದಾಜು ಮೊತ್ತ 3,605 ರೂ.ಗಳಾಗಿದೆ.