ಚೆಟ್ಟಳ್ಳಿ, ಮಾ. 21: ವೀರಾಜಪೇಟೆ ಸಮೀಪದ ಕಡಂಗದಲ್ಲಿ 4ನೇ ವರ್ಷದ ಕಡಂಗ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ ತಾ. 23 ಹಾಗೂ 24 ರಂದು ನಡೆಯಲಿದೆ ಎಂದು ಕೆ.ಪಿ.ಎಲ್. ಪಂದ್ಯಾಟದ ಸಂಚಾಲಕ ನೌಫಲ್ ತಿಳಿಸಿದ್ದಾರೆ.

ಈ ಕ್ರಿಕೆಟ್ ಪಂದ್ಯಾಟದಲ್ಲಿ ಒಟ್ಟು 5 ಗ್ರಾಮಗಳಾದ ಕಡಂಗ, ಕರಡ, ಪೊದುಮಾನಿ, ಚೌಕಿ, ಬೊಳ್ಳಮಾಡು ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ ಎಂದು ನೌಫಲ್ ತಿಳಿಸಿದರು. ಗ್ರಾಮದಲ್ಲಿ ಸೌಹಾರ್ದತೆ, ಗ್ರಾಮೀಣ ಯುವ ಪ್ರತಿಭೆಗಳನ್ನು ಮುಂದೆ ತರುವದು ಹಾಗೂ ಇವರ ಪ್ರತಿಭೆಗೆ ಸೂಕ್ತ ವೇದಿಕೆ ಕಲ್ಪಿಸುವದಾಗಿದೆ ಎಂದರು.

ಅಲ್ಲದೇ ಈ ಕ್ರೀಡಾ ಕೂಟದಿಂದ ಬರುವ ಆದಾಯವನ್ನು ಗ್ರಾಮದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ರೋಗಿಗಳಿಗೆ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಹಾಯ ಮಾಡುವದು ಮುಖ್ಯ ಉದ್ದೇಶವಾಗಿದೆ ಎಂದರು.

ಕ್ರಿಕೆಟ್ ಪಂದ್ಯಾಟದಲ್ಲಿ, ರೇಡ್ಬೇಕ್ಸ್, ರಿಸಿಂಗ್ ಸ್ಟಾರ್, ವಿ ಕಿಂಗ್ಸ್, ಟೈಟನ್ಸ್, ಬ್ಲಾಸ್ಟರ್ಶ್, ವೆಸ್ಟನ್, ಸೂಪರ್ ಗಿಲಿಸ್ ಹಾಗೂ ರಿಯಲ್ ಫೈಟರ್ಸ್ ಸೇರಿ ಒಟ್ಟು 8 ಎಂಟು ತಂಡಗಳ ನಡುವೆ ಪಂದ್ಯಾಟದ ನಡೆಯಲಿದೆ. ವಿಜೇತ ತಂಡಗಳಿಗೆ ಟ್ರೋಫಿ ಹಾಗೂ ನಗದು ಬಹುಮಾನ ನೀಡಲಾಗುವದು.