*ಸಿದ್ದಾಪುರ, ಮಾ. 21: ಇಲ್ಲಿನ ಎಸ್‍ಎನ್‍ಡಿಪಿ ಸಭಾಂಗಣದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಬಿ.ಜೆ.ಪಿ. ಅಭ್ಯರ್ಥಿ ಪ್ರತಾಪ್ ಸಿಂಹ ಮಾತನಾಡಿದರು. ಕಳೆದ ಅವಧಿಯಲ್ಲಿ ಕೊಡಗಿನ ಜನತೆಯೊಂದಿಗೆ ಹೆಚ್ಚಾಗಿ ಬೆರೆಯಲು ಸಾಧ್ಯವಾಗದಿದ್ದರೂ ಕೇಂದ್ರದ ಅನುದಾನಗಳನ್ನು ತಂದು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ.

ಮುಂದೆ ಕೊಡಗಿನ ಜನತೆಯೊಂದಿಗೆ ಹೆಚ್ಚು ಬೆರೆತು ಕೊಡಗನ್ನು ಮಾದರಿ ಜಿಲ್ಲೆಯನ್ನಾಗಿ ಮಾಡಲು ಪ್ರಯತ್ನಿಸಲಾಗುವದು ಎಂದರು. ಶಾಸಕರಾದ ಕೆ.ಜಿ. ಬೋಪಯ್ಯ, ಎಂ.ಎಲ್.ಸಿ. ಸುನಿಲ್ ಸುಬ್ರಮಣಿ, ಪಟ್ರಪಂಡ ರಘು ನಾಣಯ್ಯ, ಮಲ್ಲಂಗಡ ಮದು, ಅರುಣ್ ಭೀಮಯ್ಯ, ಸುವಿನ್ ಗಣಪತಿ, ಮೊಕೋಂಡ ಶಶಿ ಸುಬ್ರಮಣಿ, ಕಾಂತಿ ಸತೀಶ್, ವಕೀಲ ಕೃಷ್ಣಮೂರ್ತಿ, ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಕುಕ್ಕನೂರು ನಾಣಯ್ಯ, ತಾಲೂಕು ಪಂಚಾಯಿತಿ ಸದಸ್ಯ ಕೆ.ಎಂ. ಜನೀಶ್, ಪ್ರಮುಖರಾದ ಅನಿಲ್ ಶೆಟ್ಟಿ, ಎಂ.ಎ. ಆನಂದ್, ಪ್ರಭು ಶೇಖರ್, ಪಂದಿಕಂಡ ಅಶೋಕ್, ಕೆ.ಎ. ಹರಿದಾಸ್, ಕಿಶೋರ್ ಕೆ.ಎ., ಪ್ರವೀಣ್ ಪ್ರಭಾಕರ್, ರಾಜೀವ್, ಮನೋಹರ್ ಹಾಗೂ ಇತರರು ಉಪಸ್ಥಿತರಿದ್ದರು.