ಗೋಣಿಕೊಪ್ಪ ವರದಿ, ಮಾ. 21: ಇಲ್ಲಿನ ಕಾವೇರಿ ಪದವಿ ಕಾಲೇಜು ವತಿಯಿಂದ ಪೋಷಕರ ಸಭೆ ನಡೆಯಿತು. ಬೋಧಕರೊಂದಿಗೆ ಪೋಷಕರು ತಮ್ಮ ಮಕ್ಕಳ ಶೈಕ್ಷಣಿಕ ಕಾರ್ಯಚಟುವಟಿಕೆ ಹಾಗೂ ಪರೀಕ್ಷೆ ಹೇಗೆ ಎದುರಿಸುತ್ತಿದ್ದಾರೆ ಎಂಬ ಬಗ್ಗೆ ಅವಲೋಕನ ನಡೆಸಿದರು. ಉತ್ಸಾಹದಲ್ಲಿ ಪರೀಕ್ಷೆ ಎದುರಿಸಲು ಪೋಷಕರ ಪಾತ್ರದ ಬಗ್ಗೆ ಸಲಹೆ ನೀಡಲಾಯಿತು. ಈ ಸಂದರ್ಭ ಪ್ರಾಂಶುಪಾಲ ಎಸ್. ಆರ್. ಉಷಾಲತಾ, ಬೋಧಕ ಸಿಬ್ಬಂದಿ ಸಿ.ಟಿ. ಕಾವ್ಯ, ಸಿ.ಪಿ. ಸುಜಯ್, ಸೀಮಾ, ಸೀತಮ್ಮ ಹಾಗೂ ಶಾಹಿಮಾ ಇದ್ದರು.