ಮಡಿಕೇರಿ ಮಾ. 20: ಕೆದಂಬಾಡಿ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕೆದಂಬಾಡಿ ಕುಟುಂಬಸ್ಥರ ಜಂಟಿ ಆಶ್ರಯದಲ್ಲಿ ಗೌಡ ಕುಟುಂಬಗಳ ನಡುವೆ ಪ್ರತೀ ವರ್ಷ ನಡೆಸಲಾಗುವ ಕೆದಂಬಾಡಿ ಕಪ್ ಕ್ರಿಕೆಟ್ ಪಂದ್ಯಾವಳಿ ಏ. 20 ರಿಂದ ಚೆಟ್ಟಿಮಾನಿಯಲ್ಲಿ ನಡೆಯಲಿದೆ.ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಂಘದ ಹಾಗೂ ಕುಟುಂಬದ ಪ್ರಮುಖರು, ಚೆಟ್ಟಿಮಾನಿಯ ಕೆದಂಬಾಡಿ ಕುಟುಂಬದ ಐನ್‍ಮನೆ ಮೈದಾನದಲ್ಲಿ ನಡೆಯಲಿರುವ 26ನೇ ವರ್ಷದ ಈ ಪಂದ್ಯಾವಳಿಯಲ್ಲಿ 150ಕ್ಕೂ ಅಧಿಕ ಕುಟುಂಬ ತಂಡಗಳು ಭಾಗವಹಿಸುವ ನಿರೀಕ್ಷೆ ಇರುವದಾಗಿ ಹೇಳಿದರು.ಕಳೆದ ಸಾಲಿನ ಪಂದ್ಯಾವಳಿಯಲ್ಲಿ 123 ತಂಡಗಳು ಭಾಗವಹಿಸಿದ್ದು, ಎಂಟು ಓವರ್‍ಗಳಿಗೆ ಸೀಮಿತವಾದ ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಇಚ್ಛಿಸುವ ಕುಟುಂಬ ತಂಡಗಳು ಏ.10ರ ಒಳಗಾಗಿ ಮೈದಾನ ಶುಲ್ಕ ಪಾವತಿಸಿ ಹೆಸರು ನೋಂದಾಯಿ ಸಿಕೊಳ್ಳಬಹುದೆಂದ ಅವರು, ಮೈದಾನ ಶುಲ್ಕ ಪಾವತಿಸದ ತಂಡಗಳಿಗೆ ಪಂದ್ಯಾವಳಿಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವದಿಲ್ಲ ಎಂದು ಸ್ಪಷ್ಟಪಡಿಸಿದರು. ಹೆಸರು ನೋಂದಾಯಿಸಲು 8762988408, 9448422289 ಸಂಪರ್ಕಿಸಬಹುದು ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಕೆದಂಬಾಡಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆದಂಬಾಡಿ ಜಯಪ್ರಕಾಶ್, ಕೆದಂಬಾಡಿ ಕ್ರಿಕೆಟ್ ಕ್ಲಬ್‍ನ ಅಧ್ಯಕ್ಷ ಕೆದಂಬಾಡಿ ಯು. ಪ್ರಸನ್ನ ಕುಮಾರ್, ಭಾಗಮಂಡಲ ದೇವಸ್ಥಾನ ಸಮಿತಿಯ ಸದಸ್ಯ ಕೆದಂಬಾಡಿ ಟಿ. ರಮೇಶ್ ಹಾಗೂ ಕೆದಂಬಾಡಿ ನಿರಂಜನ್ ಉಪಸ್ಥಿತರಿದ್ದರು.