ಗೋಣಿಕೊಪ್ಪಲು. ಮಾ. 20: ವಾಹನವೊಂದು ಡಿಕ್ಕಿಯಾದ ಹಿನ್ನೆಲೆಯಲ್ಲಿ ಅಮಾಯಕ ಮಹಿಳೆ ಮೃತಪಟ್ಟ ಘಟನೆ ಗೋಣಿಕೊಪ್ಪಲುವಿನಲ್ಲಿ ನಡೆದಿದೆ. ನಗರದ ನಾಲ್ಕನೇ ವಿಭಾಗದ ಪಟೇಲ್ ನಗರದ ನಿವಾಸಿ ಕಲ್ಯಾಣಿ (75) ಮೃತಪಟ್ಟ ಮಹಿಳೆ. ಸಂಜೆಯ ವೇಳೆಯಲ್ಲಿ ತನ್ನ ಹಸುವನ್ನು ಮೇಯಿಸಿಕೊಂಡು ಮನೆಗೆ ವಾಪಸು ತೆರಳುತ್ತಿದ್ದ ಸಂದರ್ಭ ಎದುರಿನಿಂದ ಬಂದ ರೇಷ್ಮ ಎಂಬವರು ಚಾಲಿಸುತ್ತಿದ್ದ ಮಾರುತಿ 800 ಕಾರು ಡಿಕ್ಕಿಯಾಗಿದೆ. ರೇಷ್ಮಾಳು ತನ್ನ ಕಾರಿನಲ್ಲಿ ಚಾಲನೆ ಕಲಿಯುತ್ತಿದ್ದಳು ಎನ್ನಲಾಗಿದೆ.ಮೃತ ಮಹಿಳೆ ಕಲ್ಯಾಣಿ ತನ್ನ ಬದುಕಿಗೆ ಹಸು ಸಾಕಾಣೆ ನಡೆಸಿ ಅದರಿಂದ ಬರುವ ಹಾಲಿನಿಂದ ಜೀವನ ಸಾಗಿಸುತ್ತಿದ್ದರು.ಗೋಣಿಕೊಪ್ಪಲು ಸಮುದಾಯ ಆರೋಗ್ಯ ಕೇಂದ್ರದ ಶವಗಾರದಲ್ಲಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಇಡಲಾಗಿದೆ. ಗೋಣಿಕೊಪ್ಪಲು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲೀಸರು ವಾಹನವನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ.

-ಹೆಚ್.ಕೆ.ಜಗದೀಶ್.