ಸೋಮವಾರಪೇಟೆ, ಮಾ. 20: ಭಾರತ ಜೂನಿಯರ್ ಹಾಕಿ ತಂಡದ ತರಬೇತಿ ಶಿಬಿರಕ್ಕೆ ಆಯ್ಕೆಯಾಗಿದ್ದ ತಾಲೂಕಿನ ಹಾಕಿಪಟು ಸೂರ್ಯ, ತನ್ನ ಉತ್ತಮ ಪ್ರದರ್ಶನದ ಮೂಲಕ ಭಾರತ ಜೂನಿಯರ್ ಹಾಕಿ ತಂಡದ 33 ಸದಸ್ಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾನೆ. ಆ ಮೂಲಕ ಮುಂದಿನ ದಿನಗಳಲ್ಲಿ ದೇಶವನ್ನು ಪ್ರತಿನಿಧಿಸುವ ಭರವಸೆ ಮೂಡಿಸಿದ್ದಾನೆ. ಇದರೊಂದಿಗೆ ಕರ್ನಾಟಕದಿಂದ 33ರ ಪಟ್ಟಿಯಲ್ಲಿ ಸ್ಥಾನ ಪಡೆದ ಏಕಮಾತ್ರ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರನಾಗಿದ್ದಾನೆ.
ಮುಂದಿನ 2021ರಲ್ಲಿ ನಡೆಯಲಿರುವ ಜೂನಿಯರ್ ಹಾಕಿ ವಿಶ್ವಕಪ್ಗೆ ಭಾರತ ತಂಡವನ್ನು ಪ್ರತಿನಿಧಿಸಲು ಆಟಗಾರರ ಆಯ್ಕೆ ನಡೆಯುತ್ತಿದ್ದು, ಇದೀಗ ತರಬೇತಿ ಶಿಬಿರದಲ್ಲಿರುವ 33 ಮಂದಿಯಲ್ಲೇ ಭಾರತ ಜೂನಿಯರ್ ಹಾಕಿ ತಂಡ ರಚನೆಯಾಗಲಿದೆ.
ಸೂರ್ಯ ಪಟ್ಟಣದ ಮಹದೇಶ್ವರ ಬಡಾವಣೆಯ ಮೋಹನ್ ಮತ್ತು ಶೋಭಾ ದಂಪತಿಯ ಪುತ್ರ.