ಮಡಿಕೇರಿ, ಮಾ. 19: ಮಾನವೀಯ ಸ್ನೇಹಿತರ ಒಕ್ಕೂಟದ ವ್ಯಾಟ್ಸ್ಪ್ ಗ್ರೂಪ್ ವತಿಯಿಂದ ತಾ. 20 ರಂದು (ಇಂದು) ಬೆಳಿಗ್ಗೆ 10.30 ಗಂಟೆಗೆ ಸರಿಯಾಗಿ ಮಡಿಕೇರಿಯ ಕೊಹಿನೂರು ರಸ್ತೆ ಕೈಗಾರಿಕಾ ಕೇಂದ್ರಕ್ಕೆ ಹೋಗುವ ಮೊದಲ ಭಾಗದಲ್ಲಿ ಔಷಧಿಯ ಪೆಟ್ಟಿಗೆಯನ್ನು ಅಳವಡಿಸಲಾಗುವದು. ನಾಗರಿಕರು ಉಪಯೋಗಿಸಿ ಬಾಕಿ ಉಳಿದ ಔಷಧಿಯನ್ನು ಈ ಪೆಟ್ಟಿಗೆಗೆ ತಂದು ಹಾಕಿದರೆ ಅಂತಹ ಔಷಧಿಗಳನ್ನು ಅನಾಥ ಮತ್ತು ವೃದ್ಧಾಶ್ರಮಕ್ಕೆ ಕೊಂಡೊಯ್ದು ವೈದ್ಯರ ಮುಖಾಂತರ ರೋಗಿಗಳಿಗೆ ನೀಡಲಾಗುವದು ಎಂದು ಪ್ರಕಟಣೆ ತಿಳಿಸಿದೆ.