ಮಡಿಕೇರಿ ಮಾ. 19 :ಮಡಿಕೇರಿ ತಾಲ್ಲೂಕಿನ ಹೊದವಾಡದ ಆಜಾದ್ ನಗರದ ಹೈದ್ರೂಸ್ ಜುಮಾ ಮಸೀದಿಯಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಸ್ವಲಾತ್ ವಾರ್ಷಿಕೋತ್ಸವ ಮತ್ತು ಧಾರ್ಮಿಕ ಮತ ಪ್ರಭಾಷಣ ಇದೇ ತಾ. 20 ಮತ್ತು 21 ರಂದು ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಹೈದ್ರೂಸ್ ಜುಮಾ ಮಸೀದಿಯ ಸಹಕಾರ್ಯದರ್ಶಿ ಮೊಹಮ್ಮದ್ ಸಿನಾನ್ ಅವರು ಈ ಬಗ್ಗೆ ಮಾಹಿತಿ ನೀಡಿದರು. ಹೊದವಾಡದ ಆಜಾದ್ ನಗರದಲ್ಲಿ ತಾ. 20 ರಂದು ಸಂಜೆ 4.30 ಗಂಟೆಗೆ ಹೈದ್ರೂಸ್ ಜುಮಾ ಮಸೀದಿಯ ಅಧ್ಯಕ್ಷರಾದ ಕೆ.ಎ. ಯೂಸುಫ್ ಅವರು ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಅಂದು ರಾತ್ರಿ 8.30 ಗಂಟೆಗೆ ನಡೆಯಲಿರುವ ಮತ ಪ್ರವಚನವನ್ನು ಆಜಾದ್ ನಗರದ ಸದರ್ ಮುಅಲ್ಲಿಂ ಬಹು ಹಸ್ಸನ್ ಸಅದಿ ಅಲ್ ಕಾಮಿಲಿ ಉದ್ಘಾಟಿಸಲಿದ್ದಾರೆ. ಮುಖ್ಯ ಭಾಷಣವನ್ನು ಬಹು ಲುಖ್‍ಮಾನುಲ್ ಹಕೀಂ ಸಖಾಫಿ ಪುಲ್ಲಾರ ಅವರು ನಡೆಸಿಕೊಡಲಿದ್ದು, ಎರುಮಾಡು ತಂಙಳ್ ಸಯ್ಯಿದ್ ಇಲ್ಯಾಸ್ ಅಲ್ ಹೈದ್ರೂಸಿ ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.
ತಾ. 21ರಂದು ಮಧ್ಯಾಹ್ನ ದ್ಸಿಕ್ರ್ ಹಲ್ಖ ಮತ್ತು ಸಾರ್ವಜನಿಕ ಸಮ್ಮೇಳನ ನಡೆಯಲಿದ್ದು, ಇದನ್ನು ಕೆಆರ್‍ಐಡಿವಿಎಸ್‍ನ ಬಹು ಶಾದುಲಿ ಫೈಝಿ ಉದ್ಘಾಟಿಸಲಿದ್ದಾರೆ. ಮುಖ್ಯ ಭಾಷಣವನ್ನು ಹಾಫಿಳ್ ಅಬ್ದುಲ್ ಮಜೀದ್ ಅಹ್ಸನಿ ನಡೆಸಿಕೊಡಲಿದ್ದು, ದ್ಸಿಕ್ರ್ ಹಲ್ಖದ ನೇತೃತ್ವವನ್ನು ಸಯ್ಯಿದ್ ಶಿಹಾಬುದ್ದೀನ್ ಅಲ್ ಹೈದ್ರೂಸಿ ಕಲ್ಲರಕ್ಕಲ್ ತಂಙಳ್ ವಹಿಸಲಿದ್ದಾರೆಂದರು.
ಅಂದು ಸಂಜೆ 4.30ಕ್ಕೆ ಮೌಲೂದ್ ಪಾರಾಯಣ ಮತ್ತು ಅನ್ನದಾನ ನಡೆಯಲಿದೆ. ರಾತ್ರಿ ಬಹು ಸಯ್ಯದ್ ಅಬ್ದುಲ್ ರಹ್ಮಾನ್ ಇಂಬಿಚಿಕೋಯ ಅಲ್ ಬುಖಾರಿ ಬಾಯಾರ್ ತಂಙಳ್ ಅವರು ಸ್ವಲಾತ್ ಹಲ್ಖದ ನೇತೃತ್ವ ವಹಿಸಲಿದ್ದು, ಮುಖ್ಯ ಭಾಷಣವನ್ನು ಅಬೂಬಕರ್ ಫೈಝಿ ಕುಂಬಡಾಜೆ ನಡೆಸಿಕೊಡಲಿದ್ದಾರೆ. ಕಾರ್ಯಕ್ರಮವನ್ನು ಹೈದ್ರೂಸ್ ಜುಮಾ ಮಸೀದಿಯ ಮುದರ್ರಿಸ್ ಬಹು ಅಬ್ದುಲ್ ನಿಝಾರ್ ಅಹ್ಸನಿ ಉದ್ಘಾಟಿ ಸಲಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಹೈದ್ರೂಸ್ ಜುಮಾ ಮಸೀದಿಯ ಅಧ್ಯಕ್ಷ ಕೆ.ಎ. ಯೂಸುಫ್ ಹಾಜಿ, ಉಪಾಧ್ಯಕ್ಷ ಬಿ.ಎ. ಸುಲೈಮಾನ್ ಹಾಗೂ ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಉಪಸ್ಥಿತರಿದ್ದರು.