ವೀರಾಜಪೇಟೆ, ಮಾ. 19: ವೀರಾಜಪೇಟೆಗೆ ಸಮೀಪದ ಬೇರಳಿನಾಡು ರುದ್ರುಗುಪ್ಪೆ ಜೋಡು ಭಗವತಿ ದೇವರ ವಾರ್ಷಿಕ ಉತ್ಸವವು ತಾ: 20ರಿಂದ 28ರವರೆಗೆ ನಡೆಯ ಲಿದೆ. ತಾ. 20 ರಂದು ಕೊಡಿಮರ ನೆಡುವದರ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಗುವದು. ತಾ. 27 ರಂದು ನೆರಪು, 28 ರಂದು ದೇವರ ಸ್ನಾನ ನಡೆಯಲಿದೆ ಎಂದು ತಕ್ಕಮುಖ್ಯ ಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.