ಮಡಿಕೇರಿ, ಮಾ. 18: ಅದೃಷ್ಟ ಹಾಗೂ ವಾಸ್ತುವಿನ ಸಂಕೇತ ಎಂದು ಹೇಳಲಾಗುವ..., ಲಕ್ಷ..., ಕೋಟಿ ಬೆಲೆಗೆ ಬಿಕರಿಯಾಗುವಂತಹ ನಕ್ಷತ್ರದ ಆಮೆಯನ್ನು ಪೊಲೀಸ್ ಸಿಐಡಿ ಅರಣ್ಯ ಘಟಕದವರು ವಶಪಡಿಸಿ ಕೊಂಡು ಈ ಸಂಬಂಧ ವ್ಯಕ್ತಿ ಯೋರ್ವನನ್ನು ವಶಕ್ಕೆ ಪಡೆದು ಕೊಂಡಿದ್ದಾರೆ.ಕಾಟಕೇರಿ ನಿವಾಸಿ ಕುಮಾರ ಎಂಬಾತ ಕಾಟಕೇರಿ ರಸ್ತೆ ಬದಿ ನಕ್ಷತ್ರ ಆಮೆ ಮಾರಾಟ ಮಾಡಲು ಪ್ರಯತ್ನಿಸುತ್ತಿರುವ ಬಗ್ಗೆ ದೊರೆತ ಮಾಹಿತಿ ಮೇರೆಗೆ ಧಾಳಿ ನಡೆಸಿ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಅರಣ್ಯ ಘಟಕದ

(ಮೊದಲ ಪುಟದಿಂದ) ಸಹಾಯಕ ಠಾಣಾಧಿಕಾರಿ ಸುಭಾಶ್ ಅವರು ತಿಳಿಸಿದ್ದಾರೆ. ಪೊಲೀಸ್ ವಶದಲ್ಲಿರುವ ಕುಮಾರ ಹೇಳುವಂತೆ ಈ ಆಮೆ 3 ತಿಂಗಳ ಹಿಂದೆ ಗದ್ದೆಯಲ್ಲಿ ಸಿಕ್ಕಿದ್ದು, ತಾನು ಅದನ್ನು ಮನೆಯಲ್ಲಿ ಸಾಕುತ್ತಿದ್ದುದಾಗಿ ಹೇಳುತ್ತಾನೆ. ಸಿಐಡಿ ಘಟಕದ ಡಿಎಸ್‍ಪಿ ಪ್ರಭಾಕರ್ ಬಾರ್ಕಿ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಲಿಂಗರಾಜು, ನಾಣಯ್ಯ, ಧರ್ಮಪ್ಪ, ರಾಜೇಶ್, ಮೋಹನ್ ಇನ್ನಿತರರಿದ್ದರು.