ಮೂರ್ನಾಡು, ಮಾ. 17: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಪಂಚಾಯಿತಿ ನಿಧಿ ಹಾಗೂ ವಿಶೇಷಚೇತನರ ವಿಶೇಷ ಅನುದಾನದಲ್ಲಿ ಕೋಡಂಬೂರು ಗ್ರಾಮದ ಫಲಾನುಭವಿಗಳಿಗೆ ಸಿಂಟೆಕ್ಸ್ ಹಾಗೂ ಹೊಲಿಗೆ ಯಂತ್ರವನ್ನು ಇತ್ತೀಚೆಗೆ ವಿತರಿಸಲಾಯಿತು.
ಕೋಡಂಬೂರು ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪಂಚಾಯಿತಿ ನಿಧಿ ಅನುದಾನದಲ್ಲಿ 12 ಮಂದಿ ಫಲಾನುಭವಿಗಳಿಗೆ ಸಿಂಟೆಕ್ಸ್ ಹಾಗೂ ವಿಶೇಷಚೇತನರ ವಿಶೇಷ ಅನುದಾನದಲ್ಲಿ 3 ಮಂದಿಗೆ ಹೊಲಿಗೆ ಯಂತ್ರವನ್ನು ಸದಸ್ಯ ಮೂಡೇರ ಅಶೋಕ್ ಅಯ್ಯಪ್ಪ ವಿತರಿಸಿದರು.
ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿ ಸದಸ್ಯರಾದ ಸಿ.ವಿ. ಚೇತನ, ಗೀತಾ ಪಟ್ಟು, ಎಂ.ಎಂ. ಸಾಧಿಕ್, ಗುತ್ತಿಗೆದಾರ ಹೇಮಂತ್ ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗ, ಅಂಗನವಾಡಿ ಕಾರ್ಯಕರ್ತೆ ಗೀತಾ ಹಾಜರಿದ್ದರು.